6 ತಿಂಗಳಲ್ಲಿ ಬಿಡುಗಡೆ ಆಗಲಿದ್ದ ಕೈದಿಗೆ ಜೈಲಿನಲ್ಲೇ ಹೃದಯಾಘಾತ…

inmate
Published on

ಆನೇಕಲ್: ಹೃದಯಾಘಾತದಿಂದ ಜೈಲಿನಲ್ಲಿ ಕೈದಿಯೊಬ್ಬ ಸಾವಿಗೀಡಾಗಿದ್ದಾರೆ.

ಪ್ರಕರಣ ಒಂದರಲ್ಲಿ ಏಳು ವರ್ಷ ಶಿಕ್ಷೆಗೆ ಒಳಗಾಗಿದ್ದ ಆರೋಪಿ ಇದೀಗ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಆನೇಕಲ್ ತಾಲೂಕಿನ ರಾಯಸಂದ್ರ ಮೂಲದ ಸೋಮಶೇಖರ್ ಇನ್ನೇನು 6 ತಿಂಗಳಲ್ಲೇ ಬಿಡುಗಡೆ ಆಗಿ ಹೊಸ ಬಾಳು ಶುರು ಮಾಡಲಿದ್ದ. ಆದರೆ ವಿಧಿಯ ಆಟ ಬೇರೆಯದೇ ಆಗಿದ್ದು ಜೈಲಿನಲ್ಲಿ ಇದ್ದಾಗಲೇ ಈತನಿಗೆ ಹೃದಯಾಘಾತ ಉಂಟಾಗಿದೆ.

ಕೂಡಲೇ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲೇ ಸೋಮಶೇಖರ್ ಮೃತಪಟ್ಟಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net