

ಬೆಂಗಳೂರು :ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ವಹ್ನಿಕುಲ ಕ್ಷತ್ರಿಯ ಜಾತಿಗೆ ಬಿಡುಗಡೆಗೊಂಡ ಅನುದಾನದಲ್ಲಿ 120 ಕೋಟಿ ಭ್ರಷ್ಟಚಾರ ನಡೆದಿದ್ದು, ಮಾಜಿ ಕಾಂಗ್ರೆಸ್ ಎಂ.ಎಲ್.ಸಿ ಪಿ.ಆರ್ . ರಮೇಶ್ ಇದಕ್ಕೆ ಸೂತ್ರಧಾರರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ವಹ್ನಿಕುಲ ಕ್ಷತ್ರಿಯ ಸಂಘ ಆರೋಪಿಸಿದೆ.
ಕರ್ನಾಟಕ ಸರ್ಕಾರದ ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಉಲ್ಲೇಖ 1 ರಿಂದ 3 ರಲ್ಲಿ ತಿಳಿಸಿರುವಂತೆ ವಹ್ನಿಕುಲ ಕ್ಷತ್ರಿಯ ಮತ್ತು ತಿಗಳ ಜಾತಿಗೆ ಸೇರಿದ ಸಮುದಾಯದವರಿಗೆ 120 ಕೋಟಿ ಬಿಡುಗಡೆಗೊಳಿಸಿದ್ದೇವೆ ಎಂದು ತಿಳಿಸಿದೆ. ಆದರೆ, ವಹ್ನಿಕುಲ ಮತ್ತು ತಿಗಳ ಜನಾಂಗಕ್ಕೆ ಯಾವುದೇ ಸಂಬಂಧವಿಲ್ಲ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಂದರೆ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಡ್ಡಿ ರಹಿತ ಸಾಲ, ಅರಿವು ಶೈಕ್ಷಣಿಕ ಸಾಲ, ಗಂಗಾ ಕಲ್ಯಾಣ ನಿರಾವರಿ, ಕಿರು ಸಾಲ, ಸ್ವಯಂ ಉದ್ಯೋಗ ವೈಯಕ್ತಿಕ ಸಾಲ, ಚೈತನ್ಯ ಸಹಾಯಧನ ಸೇರಿ ಯಾವುದೇ ಯೋಜನೆಗಳ ಹಣ ನಮ್ಮ ಸಮುದಾಯಕ್ಕೆ ಬರಲಿಲ್ಲ. ನಮ್ಮ ಸಮುದಾಯದ ಹಣ ಲೂಟಿ ಮಾಡಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಅಂದಾಜು 120 ಕೋಟಿಗೂ ಅಧಿಕ ಹಣವನ್ನು ಮಾಜಿ ಕಾಂಗ್ರೆಸ್ ಎಂ.ಎಲ್.ಸಿ ಪಿ.ಆರ್. ರಮೇಶ್ ಈವರೆಗೆ ವಹ್ನಿಕುಲ ಕ್ಷತ್ರಿಯ ಸಮುದಾಯಕ್ಕೆ ಯಾವುದೇ ಒಂದು ಶಾಲಾ, ಕಾಲೇಜು, ಸಮುದಾಯ ಭವನಗಳಾನ್ನಾಗಲೀ ನಿರ್ಮಿಸಿಲ್ಲ.ಒರೆತಾಗಿ ತನ್ನದೇ ಆದ ಕಾಂಗ್ರೆಸ್ ಕಾರ್ಯಕರ್ತರ ಪಟ್ಟಾಲಂ ಕಟ್ಟಿಕೊಂಡು ಹಲವಾರು ವಹ್ನಿಕುಲ ಕ್ಷತ್ರಿಯ ಜಾತಿ ಹಾಗೂ ತಿಗಳ ಜಾತಿಯ ನಕಲಿ
ಸಂಘ-ಸಂಸ್ಥೆಗಳು,ನಕಲಿ ಖಾತೆಗಳು ಹಾಗೂ ನಕಲಿ ಫಲಾನುಭವಿಗಳನ್ನು ಬಳಸಿಕೊಂಡು ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಮುಖಂಡರುಗಳ ಖಾತೆಗಳಿಗೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವ ನಾಯಕರ ಖಾತೆಗಳಿಗೆ ಕೋಟ್ಯಾಂತರ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
2013 -14 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಅಂದು 85 ಕೋಟಿ ರೂಗಳನ್ನು ಸರ್ಕಾರದಿಂದ ಬಿಡುಗಡೆಗೊಳಿಸಿರುತ್ತಾರೆ.ಈ ಕುರಿತು ಈಗಾಗಲೇ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ವಾಸಿಸುತ್ತಿರುವ ಸುಮಾರು 2 ರಿಂದ 3 ಲಕ್ಷ ಜನಸಂಖ್ಯೆ ಹೊಂದಿರುವ ತಿಗಳ ಜನಾಂಗದವರು ತಿಗಳ ಜಾತಿಯ ನಾಯಕರಾದ ಮಾಜಿ ಎಂ.ಎಲ್.ಎ ನೆ.ಲ. ನರೇಂದ್ರಬಾಬುರವರ ನಾಯಕತ್ವದಲ್ಲಿ ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ ಕೆಲವು ಶಾಲಾ ಕಾಲೇಜು ಮತ್ತು ಸಮುದಾಯ ಭವನಗಳನ್ನು ನಿರ್ಮಾಣ ಮಾಡಿಕೊಂಡಿರುತ್ತಾರೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯದ 12 ಜಿಲ್ಲೆಗಳಲ್ಲಿ ವಹ್ನಿಕುಲ ಕ್ಷತ್ರಿಯ ಸಮುದಾಯಕ್ಕೇ ಸೇರಿದ 30 ಲಕ್ಷಕ್ಕೂ ಅಧಿಕ ಜನ ರಾಜ್ಯದೇಲ್ಲೇಡೆ ವಾಸಿಸುತ್ತಿದ್ದೇವೆ.ಆದರೆ, ನಮ್ಮ ಜಾತಿಗೆ ಯಾವುದೇ ರೀತಿಯ ಶಾಲಾ-ಕಾಲೇಜುಗಳಾಗಲಿ, ಸಮುದಾಯ ಭವನಗಳನ್ನಾಗಲೀ ನಿರ್ಮಾಣ ಮಾಡದೇ ವಹ್ನಿಕುಲ ಕ್ಷತ್ರಿಯ ನಾಯಕ ಎಂದು ಬಿಂಬಿಸಿಕೊಂಡಿರುವ ಮಾಜಿ ಎಂ.ಎಲ್.ಸಿ ಪಿ.ಆರ್.ರಮೇಶ್ ರವರು ಭ್ರಷ್ಟಚಾರದಲ್ಲಿ ತೊಡಗಿದ್ದು ವಹ್ನಿಕುಲ ಕ್ಷತ್ರಿಯ ಸಮಾಜ ಇಂದು ಶೋಷಣೆಗೆ ಒಳಗಾಗುವಂತೆ ಮಾಡಿದೆ ಎಂದರು.
ಮಾನ್ಯ ಜಾರಿ ನಿರ್ದೇಶನಾಲಯ ಮಾಜಿ ಎಂ.ಎಲ್.ಸಿ ಪಿ.ಆರ್. ರಮೇಶ್, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಇವರ ಪಟ್ಟಾಲಂ ಮೇಲೆ ಕಾನೂನು ರೀತ್ಯಾ ತನಿಖೆ ನಡೆಸಿ ಕ್ರಮ ಜರುಗಿಸಿ ಸರ್ಕಾರದ ಹಣ ಸಮುದಾಯದ ಅರ್ಹ ಪಲಾನುಭವಿಗಳಿಗೆ ತಲುಪುವಂತ ಮಾಡಬೇಕು ಜತೆಗೆ ಅನ್ಯಾಯಕ್ಕೆ , ವಂಚನೆಗೆ, ಶೋಷಣೆಗೆ ಒಳಗಾಗಿರುವ ವಹ್ನಿಕುಲ ಕ್ಷತ್ರಿಯ ಸಮುದಾಯಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು. ಉಪಾಧ್ಯಕ್ಷ ವೇಣು, ಕಾರ್ಯದರ್ಶಿ ಮಾದೇಶ್, ಗೌರವಾಧ್ಯಕ್ಷ ಪಾರ್ಥಸಾರಥಿ, ಮಂಜುನಾಥ್ ಧರ್ಮರಾಯಸ್ವಾಮಿ ದೇವಾಲಯ ಸಂಶೋಧಕ ನಾಗರಾಜು ಉಪಸ್ಥಿತರಿದ್ದರು.