ಗಾಯಗೊಂಡ ಬಳಿಕ ಫಸ್ಟ್​ ಏಡ್​ ಪಡೆಯಲು ಸೀದಾ ಮೆಡಿಕಲ್​ ಸ್ಟೋರ್​ಗೆ ಎಂಟ್ರಿ ಕೊಟ್ಟ ಮಂಗ; ವಿಡಿಯೋ ವೈರಲ್​

Monkey FirstAid
Published on

ನವದೆಹಲಿ: ಮಂಗನಿಂದ (Monkey) ಮಾನವ ಎಂಬ ಪ್ರಸಿದ್ಧ ನಾಣುಡಿಯನ್ನು ನಾವು ಅನೇಕ ಬಾರಿ ಕೇಳಿದ್ದೇವೆ. ಅದಕ್ಕೆ ಸಂಬಂಧಿಸಿದ ಅನೇಕ ಘಟನೆಗಳು ಕೂಡ ನಾವು ನೋಡಿದ್ದೇವೆ. ಇದೀಗ ಗಾಯಗೊಂಡಿರುವ ಮಂಗವೊಂದು ಮೆಡಿಕಲ್​ ಸ್ಟೋರ್​ಗೆ ಹೋಗಿ ಪ್ರಥಮ ಚಿಕಿತ್ಸೆ ಪಡೆದಿರುವ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದ್ದು, ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಾಂಗ್ಲಾದೇಶದ ಮೆಹೆರ್‌ಪುರದಲ್ಲಿ ಈ ಘಟನೆ ನಡೆದಿದ್ದು, ಗಾಯಗೊಂಡಿದ್ದ ಮಂಗವೊಂದು (Monkey) ಮೆಡಿಕಲ್​ ಸ್ಟೋರ್​ಗೆ ಬಂದು ಪ್ರಥಮ ಚಿಕಿತ್ಸೆ ಪಡೆದಿದೆ. ಮೆಹೆರ್‌ಪುರದಲ್ಲಿರುವ ಅಲ್ಹೇರಾ ಫಾರ್ಮಸಿ ಈ ಘಟನೆ ನಡೆದಿದ್ದು, ಮಂಗನಿಂದ ಮಾನವ ಎಂಬ ಪ್ರಸಿದ್ಧ ನಾಣುಡಿಯನ್ನು ನೆನಪಿಸುತ್ತಿದೆ. 

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಮಂಗವೊಂದು (Monkey) ಮೆಡಿಕಲ್ ಸ್ಟೋರ್ನ ಕೌಂಟರ್ ಮೇಲೆ ಕುಳಿತುಕೊಂಡಿದ್ದು, ವ್ಯಕ್ತಿಯೊಬ್ಬರು ಅದರ ಗಾಯಕ್ಕೆ ಮುಲಾಮು ಹಚ್ಚುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ವ್ಯಕ್ತಿಯೊಬ್ಬರು ಅದಕ್ಕೆ ಸಹಾಯ ಮಾಡುತ್ತಿದ್ದು, ಮಂಗ ಸಹಕರಿಸುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

ಪ್ರತ್ಯಕ್ಷದರ್ಶಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, ಗಾಯಗೊಂಡಿದ್ದ ಮಂಗವೊಂದು ಸೀದಾ ಮೆಡಿಕಲ್​ ಸ್ಟೋರ್ ಪ್ರವೇಶಿಸಿದ್ದು, ತನಗೆ ಮನುಷ್ಯರು ಸಹಾಯ ಮಾಡುತ್ತಾರೆ ಎಂಬ ಅರಿವಿನೊಂದಿಗೆ ಅದು ಇಲ್ಲಿಗೆ ಬಂದಿದೆ. ಅದು ಹೇಗೆ ಗಾಯಗೊಂಡಿತು ಎಂಬುದು ನಮಗೆ ತಿಳಿದಿಲ್ಲ. ಆದರೆ, ಪ್ರಥಮ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಶಾಂತವಾಗಿ ಇದ್ದದ್ದನ್ನು ನೋಡಿ ನಮಗೆ ಖುಷಿಯಾಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

amarbanglaremati ಎಂಬ ಇನ್ಸ್​ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅನೇಕರು ಮಂಗದ ನಡೆಯನ್ನು ಮೆಚ್ಚಿ ಕಮೆಂಟ್ಸ್​ ಹಾಕುತ್ತಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net