ಹನುಮಂತ ನಗರದಲ್ಲಿ ಮೂಲ ಸೌಕರ್ಯ ಮರೀಚಿಕೆ

road
ಶಿವಮೊಗ್ಗದ ಸ್ವಾಮಿ ಬಡಾವಣೆ ಪಕ್ಕದಲ್ಲಿರುವ ಹನುಮಂತ ನಗರದಲ್ಲಿನ ರಸ್ತೆ ಅವ್ಯವಸ್ಥೆ.
Published on

ಶಿವಮೊಗ್ಗ: ನಗರದ ಸ್ವಾಮಿ ವಿವೇಕಾನಂದ ಬಡಾವಣೆಗೆ ಹೊಂದಿಕೊಂಡಿರುವ ಹನುಮಂತ ನಗರದಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿದೆ. ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು ಹಾಗೂ ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆ ಹೊಂದಿರುವ ಶಿವಮೊಗ್ಗದ ಬಡಾವಣೆಯೊಂದು ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ನಿಜಕ್ಕೂ ಅಚ್ಚರಿ.

ಹನುಮಂತ ನಗರದಲ್ಲಿ ನಿವೇಶನ ಖರೀದಿಸಿ ಮನೆ ನಿರ್ಮಿಸಿಕೊಂಡಿರುವ ನಾಗರಿಕರ ಗೋಳು ಕೇಳುವವರಿಲ್ಲ. ಮಳೆಗಾಲದಲ್ಲಿ ನಿತ್ಯ ನರಕಯಾತನೆ. ಡಾಂಬರು ಕಾಣದ ರಸ್ತೆಗಳು ಅಕ್ಷರಶಃ ಕೆಸರು ಗದ್ದೆಯಾಗಿವೆ. ಬೀದಿ ದೀಪ ಇಲ್ಲದಿರುವುದರಿಂದ ರಾತ್ರಿ ವೇಳೆ ಸಂಚಾರ ಅಪಾಯಕಾರಿಯಾಗಿದೆ.
ಯುಜಿಡಿ, ಬಾಕ್ಸ್ ಚರಂಡಿಯನ್ನು ಬಡಾವಣೆಯಲ್ಲಿ ಈವರೆಗೂ ಮಾಡಿಲ್ಲ. ಇದೇ ಬಡಾವಣೆಯಲ್ಲಿ ವಸತಿ ಶಾಲೆಯೊಂದಿದೆ. ಅಲ್ಲಿನ ಮಕ್ಕಳಿಗೂ ಸಮಸ್ಯೆಗಳ ಬಿಸಿ ತಟ್ಟಿದೆ. ಅನೇಕ ಬಾರಿ ಈ ಭಾಗದ ಜನರು ಪಾಲಿಕೆ ಆಯುಕ್ತರಿಗೆ ಮನವಿ ನೀಡಿದ್ದಾರೆ. ಆದರೆ ಫಲಿತಾಂಶ ಮಾತ್ರ ಶೂನ್ಯ.
ಹೆಚ್ಚುತ್ತಿರುವ ಡೆಂೆ ನಡುವೆ ಸ್ವಚ್ಛತೆಯೆಂಬುದು ಮರೀಚಿಕೆಯಾಗಿದೆ. ಇದು ಜನರ ಆತಂಕ ಹೆಚ್ಚಳಕ್ಕೆ ಕಾರಣವಾಗಿದೆ. ಇತ್ತೀಚಿಗೆ ಬಡಾವಣೆ ನಾಗರಿಕರು ಕೈಜೋಡಿಸಿ ಖಾಲಿ ನಿವೇಶನಗಳಲ್ಲಿದ್ದ ಕಳೆ ಗಿಡಗಳನ್ನು ತೆಗೆದು ಸ್ವಚ್ಛ ಮಾಡಿದ್ದಾರೆ. ಇಷ್ಟಾದರೂ ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಲಕ್ಷೃ ಕೊಡದಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net