

ನವದೆಹಲಿ: ನೌಕರರ ರಾಜ್ಯ ವಿಮಾ ನಿಗಮ (ಇಎಸ್ಐಸಿ) ನವೆಂಬರ್ನಲ್ಲಿ ಇಎಸ್ಐ ಯೋಜನೆಯಡಿ 15.92 ಲಕ್ಷ ಹೊಸ ಉದ್ಯೋಗಿಗಳನ್ನು ಸೇರ್ಪಡೆ ಮಾಡಿದೆ ಎಂದು ಬಿಡುಗಡೆಯಾದ ತಾತ್ಕಾಲಿಕ ವೇತನದಾರರ ಅಂಕಿ-ಅಂಶ ಬಹಿರಂಗಪಡಿಸಿದೆ.
2023ರ ನವೆಂಬರ್ನಲ್ಲಿ 20,830 ಹೊಸ ಸಂಸ್ಥೆಗಳನ್ನು ನೋಂದಾಯಿಸಲಾಗಿದೆ ಮತ್ತು ಯೋಜನೆಯನ್ನು ಸಾಮಾಜಿಕ ಭದ್ರತಾ ಅಡಿಯಲ್ಲಿ ತರಲಾಗಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
ಒಟ್ಟು 15.92 ಲಕ್ಷ ಉದ್ಯೋಗಿಗಳ ಪೈಕಿ 7.47 ಲಕ್ಷ ಉದ್ಯೋಗಿಗಳ ಒಟ್ಟು ನೋಂದಣಿಗಳಲ್ಲಿ 47 ಪ್ರತಿಶತದಷ್ಟು 25 ವರ್ಷ ವಯೋಮಾನದವರಾಗಿದ್ದು, ರಾಷ್ಟ್ರದ ಯುವಜನರಿಗೆ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಡೇಟಾ ಬಹಿರಂಗಪಡಿಸಿದೆ. ಯೋಜನೆಯಡಿ ಹೊಸ ಸದಸ್ಯತ್ವ ಪಡೆದವರ ಪೈಕಿ 3.17 ಲ ಮಹಿಳಾ ಉದ್ಯೋಗಿಗಳು, 58 ಟ್ರಾನ್ಸ್ಜೆಂಡರ್ ಉದ್ಯೋಗಿಗಳೂ ಇದ್ದಾರೆ ಎಂದು ತಿಳಿಸಿದೆ.