

ಕುವೆಂಪುನಗರದ ಕಲಾ ಸುರುಚಿ ಸಂಸ್ಥೆಯಲ್ಲಿ ಜು.12 ರಂದು ಸಂಜೆ 6.30ಕ್ಕೆ ‘ಇಂದ್ರಕೀಲಕ ಊರ್ವಶಿ ಶಾಪ’ ಎಂಬ ಯಕ್ಷಗಾನ ತಾಳ ಮದ್ದಳೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಸಿರಿಬಾಗಿಲು ರಾಮಕೃಷ್ಣಮಯ್ಯ ಅವರ ಭಾಗವತಿಕೆಯಲ್ಲಿ ಸುಣ್ಣಂಬಳ ವಿಶ್ವೇಶ್ವರ ಭಟ್(ಊರ್ವಶಿ), ರಾಧಾಕೃಷ್ಣ ಕಲ್ಚಾರ್ (ಅರ್ಜುನ), ಸರ್ಪಂಗಳ ಈಶ್ವರ ಭಟ್(ಈಶ್ವರ) ಮುನ್ನೆಲೆಯಲ್ಲಿ ಕಾಣಿಸಿಕೊಳ್ಳಿದ್ದಾರೆ. ಇವರಿಗೆ ಅವಿನಾಶ್ ಬೈಪಡಿತ್ತಾಯ (ಮದ್ದಳೆ), ಜಗನ್ನಿವಾಸ ರಾವ್(ಚೆಂಡೆ) ಸಾಥ್ ನೀಡಲಿದ್ದಾರೆ.