ಹನಿಮೂನ್​ಗೆ ತೆರಳಿದ್ದ ದಂಪತಿ ನಾಪತ್ತೆ ಪ್ರಕರಣ; ಅಚ್ಚರಿ ಮಾಹಿತಿ ಕೊಟ್ಟ ಸ್ಥಳೀಯ ಗೈಡ್​! | Indore Couple

ವಿಜಯವಾಣಿ (44)
Published on

Indore Couple: ಮೇ.23ರಂದು ಕಾಣೆಯಾದ ಹನಿಮೂನ್​ ಸಲುವಾಗಿ ಮೇಘಾಲಯದ ಚಿರಾಪುಂಜಿಗೆ ಪ್ರಯಾಣಿಸಿದ್ದ ಇಂದೋರ್​ನ ದಂಪತಿ ಪ್ರಕರಣ ಇದೀಗ ಪೊಲೀಸರಿಗೆ ದೊಡ್ಡ ತಲೆನೋವಾಗಿ ಕಾಡಿದೆ. ಟ್ರೆಕ್ಕಿಂಗ್​ ಮಾಡಲು ಹೋಗಿ ಕಾಣೆಯಾದ ಘಟನೆ ಸದ್ಯ ಕುಟುಂಬಸ್ಥರನ್ನು ಅಕ್ಷರಶಃ ಕಂಗಾಲಾಗಿಸಿದೆ. ದಂಪತಿ ಪೈಕಿ ಪತಿಯ ಮೃತದೇಹ ಸಿಕ್ಕಿದ್ದು, ಸೋನಮ್​ಗಾಗಿ ಶೋಧ ಮುಂದುವರಿದಿದೆ.

ಮಿಸ್ಸಿಂಗ್ ಕೇಸ್​ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವ ಪೊಲೀಸರಿಗೆ ವ್ಯಕ್ತಿಯ ಮೃತದೇಹ ಸಿಕ್ಕಿದ್ದು, ಕಾಣೆಯಾದ ದೇಹ ಮಹಿಳೆಯ ಪತಿಯದ್ದೇ ಎಂಬುದು ಕೈಯಲ್ಲಿದ್ದ ಟ್ಯಾಟೂ ಗುರುತಿನಿಂದ ದೃಢವಾಗಿದೆ. ಚಿರಾಪುಂಜಿಯ ವೈಸಾಡಾಂಗ್ ಕಣಿವೆಯ ಜಲಪಾತದ ಬಳಿ ಬಂಡೆಯಲ್ಲಿ ನವಜೋಡಿಗೆ ಸಂಬಂಧಿಸಿದ ಬಟ್ಟೆ ಸಿಲುಕಿರುವುದು ಪತ್ತೆಯಾಗಿದೆ. ಮಹಿಳೆಯ ಪತಿ ಧರಿಸಿದ್ದ ಬಿಳಿ ಶರ್ಟ್ ಬಂಡೆಗೆ ಸಿಕ್ಕಿಕೊಂಡಿರುವುದು ಕಂಡುಬಂದಿದೆ. ಘಟನೆ ನಡೆದು 16 ದಿನಗಳು ಕಳೆದರೂ ಸೋನಮ್​ ಸುಳಿವು ಮಾತ್ರ ಇನ್ನೂ ಸಿಕ್ಕಿಲ್ಲ. ಇದು ಖಾಕಿ ಮತ್ತು ಸೋನಮ್​ ಕುಟುಂಬಸ್ಥರನ್ನು ಕಂಗಾಲಾಗಿಸಿದೆ.

ಸ್ಫೋಟಕ ಸಂಗತಿ!

'ಪಿಟಿಐ' ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಸ್ಥಳೀಯ ಗೈಡ್​ ಆಲ್ಬರ್ಟ್ ಪಿಡೆ, "ಮೇ.23ರ ಬೆಳಗ್ಗೆ 10 ಗಂಟೆ ಸುಮಾರಿಗೆ ನೊಂಗ್ರಿಯಾತ್‌ನಿಂದ ಮೌಲಖಿಯಾತ್‌ಗೆ 3,000ಕ್ಕೂ ಹೆಚ್ಚು ಮೆಟ್ಟಿಲುಗಳಿರುವ ಬೆಟ್ಟವನ್ನು ಅವರು ಇತರೆ ಮೂವರೊಂದಿಗೆ ಏರುತ್ತಿರುವುದನ್ನು ನಾನು ಗಮನಿಸಿದೆ. ಮೂವರು ಪುರುಷರೊಂದಿಗೆ ಪ್ರವಾಸಿ ದಂಪತಿಗಳನ್ನು ನೋಡಿದ್ದೇನೆ" ಎಂದು ಸ್ಫೋಟಕ ಸಂಗತಿ ಬಿಚ್ಚಿಟ್ಟಿದ್ದಾರೆ.

"ಮೇ.22ರಂದು ದಂಪತಿಗಳನ್ನು ನೊಂಗ್ರಿಯಾಟ್‌ಗೆ ಕರೆದೊಯ್ಯಲು ನಾನು ಮುಂದಾದೆ. ಆದರೆ, ಅವರು ನನ್ನ ಗೈಡ್​ ಸೇವೆಗಳನ್ನು ಒಳ್ಳೆಯ ಮಾತುಗಳಿಂದಲೇ ಬೇಡವೆಂದರು. ಇದೇ ವೇಳೆ ಭಾ ವಾನ್ಸಾಯಿ ಎಂಬ ಇನ್ನೊಬ್ಬ ಗೈಡ್​ನನ್ನು ನೇಮಕ ಮಾಡಿಕೊಂಡ ದಂಪತಿ, ಶಿಪಾರಾ ಹೋಂಸ್ಟೇಯಲ್ಲಿ ರಾತ್ರಿ ಕಳೆದು, ಮರುದಿನ ಅವರಿಬ್ಬರೇ ಹೊರಬಂದರು" ಎಂದು ಹೇಳಿದ್ದಾರೆ. ಇದು ಪೊಲೀಸರ ತನಿಖೆಯನ್ನು ಮತ್ತಷ್ಟು ಸವಾಲಾಗಿಸಿದೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net