ಮಲೇಷ್ಯಾದ ಕೌಲಾಲಂಪುರದಲ್ಲಿ ಇಂಡೋ ಇಂಟರ್ ನ್ಯಾಶನಲ್ ಫ್ಯಾಷನ್ ಕಾರ್ನಿವಲ್ & ಆವಾರ್ಡ್ ಸೀಸನ್ 2ರ ಲೋಗೋ ಅನಾವರಣ

Logo Launch
Published on

ಕೌಲಾಲಂಪುರ: ನಮ್ಮ ದೇಶದ ಸಾಂಸ್ಕೃತಿಕ ಪರಂಪರೆಯನ್ನು ವಿಶ್ವದ ಉದ್ದಗಲಕ್ಕೂ ಪರಿಚಯಿಸುವ ಇಂಡೋ ಇಂಟರ್ ನ್ಯಾಶನಲ್ ಫ್ಯಾಷನ್ ಕಾರ್ನಿವಲ್ ಮತ್ತು ಆವಾರ್ಡ್ ಸೀಸನ್ 2ರ ಲೋಗೋವನ್ನು ಮಲೇಷ್ಯಾದ ಕೌಲಾಲಂಪುರದಲ್ಲಿ ಅನಾವರಣಗೊಳಿಸಲಾಯಿತು.

ದೇಶವಿದೇಶಾದ್ಯಂತಹ ಫ್ಯಾಷನ್, ಬ್ಯೂಟಿಪೇಜ್, ಸಾಂಸ್ಕೃತಿಕ, ಕಾರ್ಪೋರೇಟ್ ಕಾರ್ಯಕ್ರಮ, ಸರ್ಕಾರಿ ಕಾರ್ಯಕ್ರಮ ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಉತ್ತಮವಾಗಿ ಆಯೋಜಿಸಿರುವ ಹೆಗ್ಗಳಿಕೆಯ ಸುಧಾ ವೆಂಚರ್ಸ್ ಈ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತಿದೆ.

ಸುಧಾ ವೆಂಚರ್ಸ್ ನ ಸಂಸ್ಥಾಪಕಿ, ಮಿಸೆಸ್ ಯೂನಿವರ್ಸ್ ಸುಧಾ ಎಂ ಕಾರ್ಯಕ್ರಮದ ರೂವಾರಿಯಾಗಿದ್ದಾರೆ. ಸುಧಾ ವೆಂಚರ್ಸ್ ಸಂಸ್ಥೆಯು ಈವರೆಗೂ ಹಲವು ಹೆಣ್ಣು ಮಕ್ಕಳಿಗೆ ವೇದಿಕೆಯನ್ನು ಒದಗಿಸುತ್ತಿದೆ. ಸುಧಾ ವೆಂಚರ್ಸ್ ಸಂಸ್ಥೆಯು ತನ್ನ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಸಹ ಸಾಮಾಜಿಕ ಕಳಕಳಿಯನ್ನು ಹೊಂದಿದೆ. ಜೊತೆಗೆ ಹಲವು ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಿ, ಅವರನ್ನು ಪ್ರೋತ್ಸಾಹಿಸುವ ಕೆಲಸವನ್ನು ಸದಾ ಮಾಡುತ್ತಾ ಬಂದಿದೆ.

Logo Launch

2025ರ ಏಪ್ರಿಲ್ 10ರಂದು ಕಾರ್ಯಕ್ರಮ ನಡೆಯಲಿದ್ದು, ಎನ್ ಟಿವಿಯ ಮೂಲಕ ಈ ಕಾರ್ಯಕ್ರಮದ ಲೋಗೋ ಅನಾವರಣ ಅದ್ದೂರಿಯಾಗಿ ನಡೆದಿದೆ. ಕೇವಲ ಭಾರತ ಮಾತ್ರವಲ್ಲ ಎಲ್ಲಾ ದೇಶಗಳ ಕಲೆ ಮತ್ತು ಸಂಸ್ಕೃತಿಯನ್ನು ಸಹ ಪ್ರಚುರ ಪಡಿಸಲು ಈ ವೇದಿಕೆ ಅತ್ಯುತ್ತಮ ಅವಕಾಶ ಒದಗಿಸಲಿದೆ. ಮಿಸ್ ,ಮಿಸಸ್ , ಮಿಸ್ಟರ್ಸ್ ಸ್ಟಾರ್ ಯೂನಿವರ್ಸ್ ಅಂಡ್ ಇಂಟರ್ ನ್ಯಾಷನಲ್ ಫ್ರೈಡ್ ಆವಾರ್ಡ್ಸ್ ಗಳನ್ನು ನೀಡುವ ಜೊತೆಗೆ ಎಲ್ಲಾ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಅವರ ಸಾಧನೆಯನ್ನು ಗೌರವಿಸುವ ವೇದಿಕೆ ಇದಾಗಿರಲಿದೆ.

ಇದು ಸಾಂಸ್ಕೃತಿಕ ಕಾರ್ಯಕ್ರಮ ಮಾತ್ರವಲ್ಲ ಇದೇ ವೇದಿಕೆಯಲ್ಲಿ ಒನ್ ಟು ಒನ್ ಬ್ಯುಸಿನೆಸ್ ಮೀಟ್ ಕೂಡ ಹೌದು.. ಇದರ ಜೊತೆಗೆ ದೇಶವಿದೇಶದ ಬಂಡವಾಳ ಹೂಡಿಕೆದಾರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು , ಬ್ಯುಸಿನೆಸ್ ಮೀಟ್ ಕೂಡ ಆಯೋಜಿಸಲಾಗಿದೆ. ಇದರಿಂದಾಗಿ ದೇಶದ ವ್ಯಾಪಾರ ಅಭಿವೃದ್ಧಿ ಮತ್ತು ಆರ್ಥಿಕ ಅಭಿವೃದ್ಧಿಯಾಗಲಿದೆ. ಬಾಲಿವುಡ್ ನ ಖ್ಯಾತನಾಮರು ಈ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಲಿದ್ದಾರೆ. ಇನ್ನೂ ಈ ಕಾರ್ಯಕ್ರಮದಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸುವ ಕಾರ್ಯಕ್ರಮ ಇದಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net