ಶ್ರೀನಗರಕ್ಕೆ 4, ಲೇಹ್‌ ಲಡಾಕ್​ಗೆ 2 ವಿಮಾನಗಳನ್ನು ತಕ್ಷಣ ರದ್ದುಗೊಳಿಸಿದ ಇಂಡಿಗೋ ಏರ್​ಲೈನ್ಸ್​!

Untitled design (2)
Published on

ಹೊಸದಿಲ್ಲಿ: ಹವಾಮಾನ ವೈಪರೀತ್ಯದಿಂದ ಶ್ರೀನಗರಕ್ಕೆ ನಾಲ್ಕು ಹಾಗೂ ಲೇಹ್​ ಲಡಾಕ್​ಗೆ ಪ್ರಯಾಣಿಸಬೇಕಿದ್ದ ಎರಡು ವಿಮಾನಗಳನ್ನು ತಕ್ಷಣವೇ ರದ್ದುಗೊಳಿಸಿದ ಇಂಡಿಗೋ ಏರ್​ಲೈನ್ಸ್​, ಈ ಕುರಿತಂತೆ ಇಂದು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪ್ರಕಟಿಸಿದೆ.

ಹವಾಮಾನದಲ್ಲಿ ಉಂಟಾದ ಭಾರೀ ಬದಲಾವಣೆಯಿಂದ ಶ್ರೀನಗರ ಮತ್ತು ಲೇಹ್‌ನಲ್ಲಿ ರನ್‌ವೇಯನ್ನು ಮುಚ್ಚಲಾಗಿದ್ದು, ಪ್ರಯಾಣಿಕರಿಗೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಇಂಡಿಗೋ ಸಂಸ್ಥೆ, ಎಲ್ಲರಿಗೂ ಉಪಹಾರಗಳನ್ನು ಕೊಟ್ಟಿದೆ. ಇದರೊಟ್ಟಿಗೆ ಪ್ರಯಾಣಿಕರಿಗೆ ಸಂಪೂರ್ಣ ಮರುಪಾವತಿ ನೀಡಿ, ಪರ್ಯಾಯ ವ್ಯವಸ್ಥೆ ಕೂಡ ಮಾಡಿದೆ.

"ನಮ್ಮ ಎಲ್ಲಾ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ನಾವು ವಿಷಾದಿಸುತ್ತೇವೆ" ಎಂದ ಇಂಡಿಗೋ ಸಂಸ್ಥೆ, ಕಣಿವೆಯಲ್ಲಿ ಹಿಮಪಾತದಿಂದಾಗಿ ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣಕ್ಕೆ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ಭಾನುವಾರ ರದ್ದುಗೊಳಿಸಲಾಗಿದೆ ಎಂದು ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net