ಇಂಡಿಗೋ ವಿಮಾನಗಳಿಗೆ ತಪ್ಪದ ಸಂಕಷ್ಟ! ಬಾಂಬ್​ ಬೆದರಿಕೆ ಎದುರಿಸಿದ ಫ್ಲೈಟ್​ಗಳು ಇವೇ ನೋಡಿ | Indigo Airlines

indigo airlines
Published on

ನವದೆಹಲಿ: ಕಳೆದ ಮೂರ್ನಾಲ್ಕು ದಿನಗಳಿಂದ ಹೆಸರಾಂತ ವಿಮಾನಯಾನ ಸಂಸ್ಥೆಗಳಿಗೆ ಬಾಂಬ್​ ಬೆದರಿಕೆಗಳು ಹೆಚ್ಚಾಗಿದ್ದು, ಈ ಸಾಲಿನಲ್ಲಿ ಇಂಡಿಗೋ ಏರ್‌ಲೈನ್ಸ್ (Indigo Airlines) ಮೊದಲಿಗಿದೆ ಎಂಬುದೇ ಇದೀಗ ಸಿಬ್ಬಂದಿ ಹಾಗೂ ಅಧಿಕಾರಿಗಳಲ್ಲಿ ಭಾರೀ ಆತಂಕ ಮೂಡಿಸಿದೆ. ಹುಸಿ ಬಾಂಬ್​ ಬೆದರಿಕೆಗಳು ಹೆಚ್ಚಿದ ಬೆನ್ನಲ್ಲೇ ಭದ್ರತಾ ಪಡೆಗಳು ಬಿರುಸಿನ ಕಾರ್ಯಾಚರಣೆ ನಡೆಸಿವೆ. ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗದಂತೆ ಸುರಕ್ಷತೆ ವಹಿಸಿರುವ ಇಂಡಿಗೋ ಸಂಸ್ಥೆ, ಕಾರ್ಯನಿರ್ವಹಿಸಬೇಕಿದ್ದ ತಮ್ಮ ವಿಮಾನಗಳನ್ನು ಸದ್ಯ ಬಾಂಬ್​ ಭೀತಿಯಿಂದ ರದ್ದುಗೊಳಿಸಿದೆ.

ಪಟ್ಟಿಯಲ್ಲಿ ಅಕಾಸಾ ಹಾಗೂ ಏರ್​ ಇಂಡಿಯಾ

ತಮ್ಮ 20 ದೇಶೀಯ ಮತ್ತು ಅಂತಾರಾಷ್ಟ್ರೀಯ ಇಂಡಿಗೋ ವಿಮಾನಗಳು ಇಂದು (ಅ.24) ಕೂಡ ಬೆದರಿಕೆ ಕರೆಗಳನ್ನು ಸ್ವೀಕರಿಸಿವೆ ಎಂದು ಸಂಸ್ಥೆ ದೃಢಪಡಿಸಿದೆ. ಎಲ್ಲಾ ಪೀಡಿತ ವಿಮಾನಗಳಲ್ಲಿನ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಸಂಬಂಧಿತ ಅಧಿಕಾರಿಗಳ ಸಹಯೋಗದೊಂದಿಗೆ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗಿದೆ ಎಂದು ಏರ್‌ಲೈನ್ ಖಚಿತಪಡಿಸಿದೆ. ಬಾಂಬ್​ ಸ್ಫೋಟಿಸುವುದಾಗಿ ನೀಡಿದ ಬೆದರಿಕೆ ಕರೆ ಲಿಸ್ಟ್​ನಲ್ಲಿ ಇಂಡಿಗೋ ಜತೆಗೆ ಅಕಾಸಾ ಹಾಗೂ ಏರ್​ ಇಂಡಿಯಾ ವಿಮಾನಗಳು ಸಹ ಸೇರಿವೆ. ಈ ಸಂಸ್ಥೆಗಳು ಕೂಡ ಇದೇ ರೀತಿಯ ಬೆದರಿಕೆಗಳನ್ನು ಸ್ವೀಕರಿಸಿವೆ ಎಂದು ವರದಿಯಾಗಿದೆ.

ಬೆದರಿಕೆ ಸ್ವೀಕರಿಸಿದ ಇಂಡಿಗೋ ವಿಮಾನಗಳು

ವಿಮಾನ 6E 112: ಚಂಡೀಗಢ-ಅಹಮದಾಬಾದ್

ವಿಮಾನ 6E 394: ಗುವಾಹಟಿ-ಕೋಲ್ಕತ್ತಾ

ವಿಮಾನ 6E 362: ಹೈದರಾಬಾದ್‌-ಗೋವಾ

ವಿಮಾನ 6E 334: ಕೋಲ್ಕತ್ತಾ-ಹೈದರಾಬಾದ್

ವಿಮಾನ 6E 235: ಕೋಲ್ಕತ್ತಾ-ಬೆಂಗಳೂರು

ಫ್ಲೈಟ್ 6E 236: ಬೆಂಗಳೂರು-ಕೋಲ್ಕತ್ತಾ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net