ಮಧ್ಯಮ ವರ್ಗದಿಂದ ಬಂದ ಈ ಜನಪ್ರಿಯ ಯೂಟ್ಯೂಬರ್ ಸಂಪಾದನೆ ಕೇಳಿದ್ರೆ ಹುಬ್ಬೇರಿಸ್ತೀರಾ!

bhuvan
Published on

ನವದೆಹಲಿ: ಯೂಟ್ಯೂಬ್​​ನಿಂದ ಅನೇಕ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಹಾಗೆಯೇ ತಮಗೆ ಗೊತ್ತಿರದ ವಿಷಯಗಳನ್ನು ಯೂಟ್ಯೂಬ್ ನೋಡಿ ಕಲಿತವರು ಇದ್ದಾರೆ. ಮನರಂಜನೆಗೆ ಮಾತ್ರವಲ್ಲದೆ, ಕಲಿಕೆಗೂ ದಾರಿಮಾಡಿಕೊಟ್ಟಿರುವ ಯೂಟ್ಯೂಬ್​​​ನಲ್ಲಿ ಜನಪ್ರಿಯತೆ ಗಳಿಸಿರುವವರು, ಕೋಟಿಗಟ್ಟಲೇ ಹಣಸಂಪಾದನೆ ಮಾಡಿರುವವರು ಮಾತ್ರ ಬೆರಳಣಿಕೆಯಷ್ಟು. ಅಂದಹಾಗೆ ಜನಪ್ರಿಯ ಯೂಟ್ಯೂಬರ್ ಭುವನ್ ಬಾಮ್ ಹೆಸರು ಕೇಳಿರಬೇಕಲ್ಲಾ?, ಈತನನ್ನು ಭಾರತದ ಶ್ರೀಮಂತ ಯೂಟ್ಯೂಬರ್ ಎಂದು ಪರಿಗಣಿಸಲಾಗಿದೆ.

ಸಾಮಾನ್ಯವಾಗಿ ಜನಸಂದಣಿಯಿಂದ ಸ್ವಲ್ಪ ಹೊರಗುಳಿಯಲು ಇಷ್ಟಪಡುವ ಭುವನ್ ಬಾಮ್​​ ಅನೇಕರಿಗೆ ಸ್ಫೂರ್ತಿದಾಯಕವಾಗಿದ್ದಾರೆ. ಅಷ್ಟೇ ಅಲ್ಲ, ಭಾರತದ ಶ್ರೀಮಂತ ಯೂಟ್ಯೂಬರ್ ಎಂಬ ಖ್ಯಾತಿಗೆ ಪಾತ್ರವಾಗಿದ್ದಾರೆ.

ಮಧ್ಯಮ ವರ್ಗದದಿಂದ ಬಂದವರು

ಸಂಗೀತಗಾರರಾಗಿ ಮನರಂಜನಾ ಉದ್ಯಮದಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಭುವನ್ ಬಾಮ್, ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಆದರೆ ಈ ಕ್ಷೇತ್ರದಲ್ಲಿ ಅತ್ಯಧಿಕ ಸಂಭಾವನೆ ಪಡೆಯುತ್ತಿರುವ ಭಾರತದ ಅಗ್ರ ಯೂಟ್ಯೂಬರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.

ಭುವನ್ ಬಾಮ್ ಮೂಲತಃ ಗುಜರಾತ್‌ನ ವಡೋದರಾದವರು. ಸಂಗೀತದ ಬಗ್ಗೆ ಒಲವು ಹೊಂದಿದ್ದ ಭುವನ್ ಬಾಮ್, ಮೊದಮೊದಲು ದೆಹಲಿಯ ಸಣ್ಣ ಸಣ್ಣ ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಹಾಡುತ್ತಿದ್ದರು. ಜತೆಗೆ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದರು. ಮೂಲಗಳ ಪ್ರಕಾರ, ಕೆಫೆಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಹಾಡುತ್ತಿದ್ದಾಗ ಭುವನ್ ಸಿಗುತ್ತಿದ್ದ ಸಂಭಾವನೆ ತಿಂಗಳಿಗೆ ಕೇವಲ 5000 ರೂ. ಇದೇ ಕಾರಣಕ್ಕಾಗಿ ಅವರು ಯೂಟ್ಯೂಬ್‌ಗೆ ಪ್ರವೇಶಿಸಿದರು.

ಮೊದಲ ಸಂಭಾವನೆ ಎಷ್ಟಿತ್ತು?

ಭುವನ್ ಬಾಮ್ ಯೂಟ್ಯೂಬ್‌ನಲ್ಲಿ ಅಪ್​​ಲೋಡ್​​​ ಮಾಡಿದ ಮೊದಲ ವಿಡಿಯೋ ಸಾಕಷ್ಟು ಜನರ ಗಮನಸೆಳೆಯಿತು. ಪತ್ರಕರ್ತರೊಬ್ಬರು ಪ್ರವಾಹದಲ್ಲಿ ಮನೆ ಕಳೆದುಕೊಂಡ ವ್ಯಕ್ತಿಗೆ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಿದ್ದನ್ನು ಭುವನ್ ಗಮನಿಸಿದರು. ಇದೇ ಪ್ರಶ್ನೆಗಳನ್ನಿಟ್ಟುಕೊಂಡು ಭುವನ್ ಹಾಸ್ಯಸ್ಪದವಾಗಿ ತೋರಿಸಿದರು. ಇದರಿಂದ ಅವರ ಕೌಶಲ ಆಚೆ ಬಂದು ಶೀಘ್ರದಲ್ಲೇ ಜನಪ್ರಿಯತೆ ಪಡೆದರು.

ಇದೇ ನೋಡಿ ಮೊದಲ ವಿಡಿಯೋ

ಭುವನ್ ಬಾಮ್ ಬಿಬಿ ಕಿ ವೈನ್ಸ್ ಎಂಬ ತನ್ನದೇ ಆದ ಸರಣಿ ಕೂಡ ಪ್ರಾರಂಭಿಸಿದರು. ಇದರಲ್ಲಿ ಅವರು ತಮ್ಮ ಕುಟುಂಬ ಮತ್ತು ಕೆಲವು ಸ್ನೇಹಿತರ ಕಿರು ವಿಡಿಯೋಗಳನ್ನು ಪೋಸ್ಟ್ ಮಾಡಿದರು, ತಮಾಷೆಯಾಗಿರುತ್ತಿದ್ದ ಈ ವಿಡಿಯೋ ಜನಸಾಮಾನ್ಯರಿಗೆ ಇಷ್ಟವಾಗತೊಡಗಿತು. ಇಲ್ಲಿಂದ ಭುವನ್ ಹಿಂತಿರುಗಿ ನೋಡಲೇ ಇಲ್ಲ ಇಲ್ಲಿಯವರೆಗೆ ಅವರು 26 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ.

ಬಿಬಿ ಕಿ ವೈನ್ಸ್

ಭುವನ್ ಬಾಮ್​​ನ ನಿವ್ವಳ ಮೌಲ್ಯ US $ 15 ಮಿಲಿಯನ್ ಅಂದರೆ ಸುಮಾರು 122 ಕೋಟಿ ರೂ. ಅಂದಹಾಗೆ ಭುವನ್​​​ಗೆ ಯೂಟ್ಯೂಬ್​ನಿಂದ ಮಾತ್ರವಲ್ಲದೆ, ಕೆಲವು ಬ್ರ್ಯಾಂಡ್, ವೆಬ್ ಸಿರೀಸ್, ಸಿನಿಮಾದಲ್ಲಿ ನಟನೆ ಮಾಡುವುದರಿಂದಲೂ ಆದಾಯ ಬರುತ್ತದೆ.

ಆದಾಯವೆಷ್ಟಿದೆ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net