

ನವದೆಹಲಿ: ಏಪ್ರಿಲ್ 2024ರ ಏಪ್ರಿಲ್‌ನಲ್ಲಿ ಭಾರತದ ಸರಕು ರಫ್ತುಗಳು 34.99 ಶತಕೋಟಿ ಡಾಲರ್ಗೆ (2,92,189 ಕೋಟಿ ರೂಪಾಯಿ) ಏರಿಕೆಯಾಗಿದೆ.
ಹಿಂದಿನ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಈ ಮೊತ್ತ 34.62 ಶತಕೋಟಿ ಡಾಲರ್ ಇತ್ತು ಎಂದು ಬುಧವಾರ ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳು ಬಹಿರಂಗಪಡಿಸಿವೆ.
ಆಮದು ಕೂಡ 2024ರ ಏಪ್ರಿಲ್‌ನಲ್ಲಿ 54.09 ಶತಕೋಟಿ ಡಾಲರ್ಗೆ ಏರಿಕೆಯಾಗಿದೆ. 2023ರ ಏಪ್ರಿಲ್ ತಿಂಗಳಲ್ಲಿ ಈ ಮೊತ್ತ 49.06 ಶತಕೋಟಿ ಡಾಲರ್ ಇತ್ತು.
ವ್ಯಾಪಾರ ಕೊರತೆ ಅಂದರೆ, ಆಮದು ಮತ್ತು ರಫ್ತಿನ ನಡುವಿನ ಅಂತರವು ಈ ತಿಂಗಳಲ್ಲಿ 19.1 ಶತಕೋಟಿ ಡಾಲರ್ ಇತ್ತು.
ಮಾಧ್ಯಮಗಳ ಜತೆ ಈ ಅಂಕಿ-ಅಂಶಗಳನ್ನು ಹಂಚಿಕೊಂಡ ವಾಣಿಜ್ಯ ಕಾರ್ಯದರ್ಶಿ ಸುನೀಲ್ ಬರ್ತ್ವಾಲ್ ಅವರು, ಹೊಸ ಆರ್ಥಿಕ ವರ್ಷವು ಉತ್ತಮ ರೀತಿಯಲ್ಲಿ ಪ್ರಾರಂಭವಾಗಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಇದು ಮುಂದುವರಿಯುತ್ತದೆ ಎಂದು ಆಶಿಸಿದರು.