

ನವದೆಹಲಿ: ದೇಶದಲ್ಲಿ ಕರೊನಾ ಸೋಂಕಿತರ ಸಂಖ್ಯೆ ತುಂಬ ಕಡಿಮೆ ಅವಧಿಯಲ್ಲಿ ಲಕ್ಷದಷ್ಟು ಏರುತ್ತಿದೆ. ನಾಲ್ಕೈದು ದಿನಗಳ ಹಿಂದಷ್ಟೇ 7 ಲಕ್ಷ ತಲುಪಿದ್ದ ಕರೊನಾ ಸೋಂಕಿತರ ಸಂಖ್ಯೆ ಇಂದು 8 ಲಕ್ಷದ ಅಂಚಿನಲ್ಲಿ ನಿಂತಿದೆ.
ಮಹಾರಾಷ್ಟ್ರ, ತಮಿಳುನಾಡು, ದೆಹಲಿಯಲ್ಲಿ ಸೋಂಕಿತರ ಪ್ರಮಾಣ ಭರ್ಜರಿ ಏರುತ್ತಿದೆ. ಇಂದು ಬೆಳಗ್ಗೆ ದೇಶದ ಕರೊನಾ ಸೋಂಕಿತರ ಸಂಖ್ಯೆ 7,93,802ಕ್ಕೆ ತಲುಪಿದ್ದು, ನಾಳೆ ಬೆಳಗ್ಗೆಯಷ್ಟರಲ್ಲಿ 8 ಲಕ್ಷ ಮೀರುವುದು ಖಚಿತವಾಗಿದೆ. 21,604 ಮಂದಿ ಇದುವರೆಗೆ ಸಾವನ್ನಪ್ಪಿದ್ದಾರೆ.
ದೇಶಾದ್ಯಂತ ಕರೊನಾ ಹೆಚ್ಚುತ್ತಿರುವ ಕಾರಣ ಹಲವು ಜಿಲ್ಲೆಗಳು ಮತ್ತೆ ಲಾಕ್ಡೌನ್ ಹೇರುತ್ತಿವೆ. ಅಷ್ಟಾದರೂ ಸೋಂಕಿನ ಸಂಖ್ಯೆಯಲ್ಲಿ ಸ್ವಲ್ಪವೂ ಇಳಿಮುಖವಾಗುತ್ತಿಲ್ಲ.
ಇನ್ನು ದೇಶದಲ್ಲಿ ಕರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಪ್ರಮಾಣ ಶೇ.63ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. (ಏಜೆನ್ಸೀಸ್)