24 ಗಂಟೆಯಲ್ಲಿ 2ಸಾವಿರಕ್ಕೂ ಅಧಿಕ ಕರೊನಾ ಸೋಂಕಿತರು ಪತ್ತೆ; ಸಾವಿರ ಮಂದಿ ಡಿಸ್​​ಚಾರ್ಜ್​

andhra pradesh corona
Published on

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 2313 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಹಾಗೇ 1003 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​​ಚಾರ್ಜ್​ ಆಗಿದ್ದಾರೆ. 57 ಸೋಂಕಿತರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 33,418ಕ್ಕೆ ಏರಿದೆ. ಅವರಲ್ಲಿ ಡಿಸ್​ಚಾರ್ಜ್​ ಆದವರು 13,836 ಮತ್ತು ಸಾವನ್ನಪ್ಪಿದವರು 543 ಮಂದಿ. ಕರೊನಾ ಸಕ್ರಿಯ ಪ್ರಕರಣಗಳು 19,035 ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದನ್ನೂ ಓದಿ: ವಿಕಾಸ್​ ದುಬೆ ಎನ್​ಕೌಂಟರ್​ಗೆ ಮರುಗಿದ ಟಿಎಂಸಿ ಸಂಸದೆ; ನ್ಯಾಯವನ್ನೇ ಕೊಲ್ಲುತ್ತಿದ್ದಾರೆ ಯೋಗಿ ಜಿ ಎಂದ ಮಾಹುವಾ

ಇಂದೂ ಕೂಡ ಬೆಂಗಳೂರಿನಲ್ಲಿ ಸಾವಿರ ದಾಟಿದೆ. ಯಾವ ಜಿಲ್ಲೆಗಳಲ್ಲಿ ಎಷ್ಟು ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ...

ಬೆಂಗಳೂರು ನಗರ-1447

ದಕ್ಷಿಣ ಕನ್ನಡ-139

ವಿಜಯಪುರ-89

ಬಳ್ಳಾರಿ-66

ಕಲಬುರಗಿ-58

ಯಾದಗಿರಿ-51

ಮೈಸೂರು-51

ಧಾರವಾಡ-50

ಹಾವೇರಿ-42

ಉಡುಪಿ-34

ಉತ್ತರ ಕನ್ನಡ-33

ಕೊಡಗು-33

ಮಂಡ್ಯ-31

ರಾಯಚೂರು-25

ರಾಮನಗರ-23

ದಾವಣಗೆರೆ-21

ಬೀದರ್​-19

ಗದಗ-19

ಬೆಳಗಾವಿ-15

ಚಿಕ್ಕಬಳ್ಳಾಪುರ-12

ತುಮಕೂರು-10

ಕೋಲಾರ-9

ಚಾಮರಾಜನಗರ-9

ಕೊಪ್ಪಳ-7

ಹಾಸನ-6

ಶಿವಮೊಗ್ಗ-6

ಬಾಗಲಕೋಟೆ-6

ಬೆಂಗಳೂರು ಗ್ರಾಮಾಂತರ-1

ಚಿಕ್ಕಮಗಳೂರು-1

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net