

ನವದೆಹಲಿ: ದೇಶದ ಮೊದಲ ಬುಲೆಟ್ ಟ್ರೇನ್ ಚಿತ್ರವನ್ನು ಜಪಾನ್ ಕಂಪನಿ ಬಿಡುಗಡೆ ಮಾಡಿದೆ. ಬುಲೆಟ್ ಟ್ರೇನ್ ಇ-5 ಸರಣಿ ಷಿಂಕಾನ್ಸೆನ್ನ ಮೊದಲ ಚಿತ್ರಗಳು ಲಭ್ಯವಾಗಿದೆ.
ಮುಂಬೈ - ಅಹಮದಾಬಾದ್ ನಡುವೆ ಈ ರೈಲು ಸಂಚರಿಸಲಿದೆ. ಭಾರತದಲ್ಲಿರುವ ಜಪಾನ್ ರಾಯಭಾರ ಕಚೇರಿ ಬುಲೆಟ್ ಟ್ರೇನ್ ಇ-5 ಸರಣಿ ಷಿಂಕಾನ್ಸೆನ್ನ ಕೆಲವು ಚಿತ್ರಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ. ಅದನ್ನು ಅಲ್ಪ ಬದಲಾವಣೆ ಮಾಡಿ ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲ್ವೆ (ಎಂಎಎಚ್ಎಸ್ಆರ್) ಯೋಜನೆಯ ಭಾಗವಾಗಿ ಬಳಸಲಾಗುತ್ತದೆ. ಈ ಯೋಜನೆಯಿಂದ ಮುಂಬೈ ಮತ್ತು ಅಹಮದಾಬಾದ್ ನಡುವಿನ ಪ್ರಯಾಣ ಅವಧಿ 2 ಗಂಟೆಗೆ ಇಳಿಯಲಿದೆ.