ರಾಯೊ ರೇಸಿಂಗ್ ಪರ ಮಾಜಿ ಫಾರ್ಮುಲಾ-1 ಚಾಲಕ ಅಲೆಕ್ಸ್ ಯಂಗ್ ಅವರ ಆ್ಯಕ್ಸಲ್ ಸ್ಪೋರ್ಟ್ಸ್ ತಂಡಕ್ಕಾಗಿ ಸ್ಪರ್ಧಿಸಿದ ಆದಿತ್ಯ, ಮಳೆ ಹಾಗೂ ಬದಲಾಗುತ್ತಿದ್ದ ಹವಾಮಾನದ ಕಾರಣ ಕಠಿಣವಾಗಿದ್ದ ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. 21 ಚಾಲಕರ ಸ್ಪರ್ಧೆಯಲ್ಲಿ ಮೊದಲ ರೇಸ್ ಆರಂಭದಲ್ಲೇ ಕೆಲ ಸ್ಥಾನಗಳನ್ನು ಕಳೆದುಕೊಂಡರೂ, ಮಲೇಷ್ಯಾದ ತಾಜ್ ಐಮಾನ್ ವಿರುದ್ಧ ರೋಚಕ ಪೈಪೋಟಿ ನಡೆಸಿ ಮೂರನೇ ಸ್ಥಾನ ಗಳಿಸಿದರು. ಲ್ಯೂ ಝುವಾನ್ ಯಾನ್ ಮೊದಲ ಹಾಗೂ ತಾಜ್ ಐಮಾನ್ ಎರಡನೇ ಸ್ಥಾನ ಪಡೆದರು.