ತಜ್ಞ ಅಭಿಪ್ರಾಯ: ಭಾರತೀಯರಿಗೆ ಅನುಕೂಲವಾಗುವ ಸಂಭವ

biden
Published on

ಬೈಡೆನ್ ಅಮೆರಿಕ ಅಧ್ಯಕ್ಷ ಎಂದು ಅಧಿಕೃತವಾಗಿ ಘೋಷಣೆ ಆಗಬೇಕಿದೆ. ಟ್ರಂಪ್ ಅಷ್ಟೇ ಅಲ್ಲ, ಬೈಡೆನ್ ಜತೆಗೂ ಮೋದಿ ಉತ್ತಮ ಸಂಬಂಧ ಹೊಂದಿದ್ದಾರೆ. ಆದರೆ, ಕಾಶ್ಮೀರದ ವಾಸ್ತವ ಪರಿಸ್ಥಿತಿ ತಿಳಿಯದೇ ಅಲ್ಲಿ ಮಾನವ

ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಮೋದಿ ಅಧಿಕಾರಕ್ಕೆ ಬಂದ ಮೇಲೆ ಕಾಶ್ಮೀರದಲ್ಲಾಗಿರುವ ಬದಲಾವಣೆ ಕುರಿತು ಅವರು ಅವಲೋಕಿಸಿಲ್ಲ. ಚೀನಾ ಜತೆಗೆ ವ್ಯಾಪಾರ ಸಂಬಂಧ ಅಮೆರಿಕ ಹಾಕಿರುವ ಷರತ್ತುಗಳನ್ನು ಅದೇ ರೀತಿ ಮುಂದುವರಿಸಿಕೊಂಡು ಹೋದ ಪಕ್ಷದಲ್ಲಿ ನಮ್ಮ ಭಾರತಕ್ಕೆ ಅನುಕೂಲವಾಗಲಿದೆ. ಅದನ್ನು ತೆಗೆದು ಹಾಕಿದರೆ ಕಷ್ಟ.

ಭಾರತೀಯರು ಚುನಾವಣೆಗಾಗಿ ಹಣ ಸಂಗ್ರಹ ಮಾಡಿ ಬೈಡೆನ್​ಗೆ ನೀಡಿದ್ದಾರೆ. ಇದರಿಂದ ಭಾರತೀಯ ಮೇಲೆ ಪ್ರೇಮ ಇದ್ದೇ ಇದೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಫೇಸ್​ಬುಕ್ ಅಂತಹ ದೊಡ್ಡ ಕಂಪನಿಗಳು ಸಹ ಬೈಡೆನ್ ಚುನಾವಣೆಗೆ ಆರ್ಥಿಕ ನೆರವು ನೀಡಿವೆ. ಈ ಕಂಪನಿಗಳಿಗೆ ಕೆಲಸ ಮಾಡಲು ಭಾರತೀಯರ ಅವಶ್ಯಕತೆ ಇರುವುರಿಂದ ಟ್ರಂಪ್ ರದ್ದು ಮಾಡಿದ್ದ ಎಚ್​ಒನ್ ವೀಸಾವನ್ನು ಪರಿಶೀಲಿಸಿ ಹಳೆಯ ಮಾದರಿಯನ್ನು ಜಾರಿಗೊಳಿಸುವ ಸಾಧ್ಯತೆ ಹೆಚ್ಚಿದೆ.

| ಡಾ.ಮನಮೋಹನ್ ಕಟಪಾಡಿ ಓಹಿಯೊ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net