ಭಾರತೀಯರ ಎಐ ಬಳಕೆ ಉತ್ಸಾಹ; ಸಿಇಒ ಸ್ಯಾಮ್ ಆಲ್ಟ್​ಮನ್ ಶ್ಲಾಘನೆ

Untitled design
Published on

ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಭಾರತದಲ್ಲಿ ಅಳವಡಿಕೆಯಾಗುತ್ತಿರುವ ವೇಗವನ್ನು ಶ್ಲಾಘಿಸಿರುವ ಓಪನ್ ಎಐ ಸಿಇಒ ಸ್ಯಾಮ್ ಆಲ್ಟ್ ಮನ್, ಶೀಘ್ರವೇ ಎಐ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಮಾರುಕಟ್ಟೆಯಾಗಿ ಭಾರತ ಹೊರಹೊಮ್ಮಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಜೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಅವರ ‘ಪೀಪಲ್ ಬೈ ಡಬ್ಲ್ಯೂಟಿಎಫ್’ ಪಾಡ್​ಕಾಸ್ಟ್​ನಲ್ಲಿ ಮಾತನಾಡಿರುವ ಆಲ್ಟ್​ಮನ್, ಎಐಗೆ ತ್ವರಿತವಾಗಿ ಒಗ್ಗಿಕೊಳ್ಳುವ ಭಾರತದ ಉತ್ಸಾಹ ಮತ್ತು ಸಾಮರ್ಥ್ಯವನ್ನು ಪ್ರಶಂಸಿಸಿದ್ದಾರೆ. ಇದು ಭಾರತಕ್ಕೆ ಸಾಮಾಜಿಕ ಮತ್ತು ಆರ್ಥಿಕ ಪ್ರಯೋಜನಗಳನ್ನು ತಂದುಕೊಡಲಿದೆ ಎಂದಿದ್ದಾರೆ. ‘ಭಾರತೀಯರ ಅದ್ಭುತ ಚೈತನ್ಯ ಮತ್ತು ವಿವಿಧ ವಲಯಗಳಲ್ಲಿ ಎಐ ಅಳವಡಿಸಿಕೊಳ್ಳುವ ಉತ್ಸಾಹ ಅನನ್ಯ. ಎಐ ಬಳಸಿ ಸಂಪೂರ್ಣ ಹೊಸದನ್ನು ಆವಿಷ್ಕರಿಸುವ ಭಾರತೀಯರ ಸಾಮರ್ಥ್ಯ ಬೇರೆಲ್ಲೂ ಕಾಣದು. ಅದರಿಂದ ಬರುವ ಆರ್ಥಿಕ ಮತ್ತು ಸಾಮಾಜಿಕ ಪ್ರಯೋಜನಗಳೂ ಸಾಕಷ್ಟಿವೆ. ಇಡೀ ಜಗತ್ತಿನಲ್ಲಿ ಯಾವುದಾದೂರ ಒಂದು ದೊಡ್ಡ ಸಮುದಾಯ ಎಐ ಜೊತೆಗೆ ರೂಪಾಂತರಗೊಳ್ಳಲು ಉತ್ಸಾಹ ತೋರುತ್ತಿದ್ದರೆ ಅದು ಭಾರತವೇ’ ಎಂದು ಆಲ್ಟ್​ಮನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net