ಯುಪಿಐ ಯುಗದಲ್ಲೂ ನಗದು ಪ್ರೀತಿ ಬಿಡದ ಭಾರತೀಯರು: ಏನಿದು ‘ಕ್ಯಾಶ್ ಪ್ಯಾರಾಡಾಕ್ಸ್’ ವಿಸ್ಮಯ? | Demonetisation

Even 10 years after demonetization
ನೋಟು ರದ್ದಾಗಿ 10 ವರ್ಷ ಕಳೆದ್ರೂ ಕಡಿಮೆ ಆಗಿಲ್ಲ ಕ್ಯಾಶ್ ಕ್ರೇಜ್
Published on: 

10 Years Of Demonetisation: ರೋಡ್‌ಸೈಡ್ ಟೀ ಅಂಗಡಿಯಿಂದ ಹಿಡಿದು ದೊಡ್ಡ ಮಾಲ್‌ಗಳವರೆಗೆ ಎಲ್ಲೆಡೆ ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಿ ಯುಪಿಐ ಪಾವತಿ ಮಾಡೋದು ಇವತ್ತು ಸಾಮಾನ್ಯವಾಗಿದೆ. ಆದರೂ ದೇಶದಲ್ಲಿ ಡಿಜಿಟಲ್ ಪಾವತಿ ಎಷ್ಟೇ ಬೆಳೆದರೂ, ನಗದು ಹಣದ ಮಹತ್ವ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ.

ನೋಟು ಬ್ಯಾನ್ ಆಗಿ ದಶಕವೇ ಕಳೆದಿದೆ. ಆದರೂ ಭಾರತೀಯ ಆರ್ಥಿಕತೆಯಲ್ಲಿ ನಗದು ಹಣದ ಪ್ರಾಮುಖ್ಯತೆ ಮಾತ್ರ ಹಾಗೆಯೇ ಮುಂದುವರೆದಿದ್ದು, ಈ ವಿದ್ಯಮಾನವನ್ನು ತಜ್ಞರು ‘ಕ್ಯಾಶ್ ಪ್ಯಾರಾಡಾಕ್ಸ್’ ಎಂದು ವಿಶ್ಲೇಷಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ನೀಡಿರುವ ಅಂಕಿಅಂಶಗಳ ಪ್ರಕಾರ, 2016ರ ನವೆಂಬರ್ 8ರಂದು 17.77 ಲಕ್ಷ ಕೋಟಿ ರೂ.ಗಳಷ್ಟಿದ್ದ ಚಲಾವಣೆಯಲ್ಲಿದ್ದ ಹಣದ ಮೊತ್ತ, 2026ರ ಅಕ್ಟೋಬರ್ ವೇಳೆಗೆ 43.16 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

ಮತ್ತೊಂದೆಡೆ, 2016-17ರಲ್ಲಿ ಕೇವಲ 1.78 ಕೋಟಿಯಷ್ಟಿದ್ದ ಯುಪಿಐ ವಹಿವಾಟುಗಳು 2025-26ರಲ್ಲಿ 24,162 ಕೋಟಿಗೂ ಮೀರಿ ಬೆಳೆದಿವೆ. ಅಂದರೆ ಭಾರತೀಯರು ಸಣ್ಣ-ಪುಟ್ಟ ಖರೀದಿಯಿಂದ ಹಿಡಿದು ದೊಡ್ಡ ಮೊತ್ತದವರೆಗೂ ಯುಪಿಐ ಬಳಸುತ್ತಿದ್ದರೂ, ತುರ್ತು ಅಗತ್ಯಗಳಿಗೆ ಹಾಗೂ ಹಣವನ್ನು ಕಾಯ್ದಿರಿಸಲು ನಗದು ಹಣವನ್ನೇ ಹೆಚ್ಚು ನೆಚ್ಚಿಕೊಂಡಿದ್ದಾರೆ.

ಇಂಟರ್ನೆಟ್ ಸಂಪರ್ಕವಿಲ್ಲದ ಪ್ರದೇಶಗಳು, ಸಣ್ಣ ವ್ಯಾಪಾರಿಗಳು, ದಿನಗೂಲಿ ನೌಕರರು ಹಾಗೂ ಸ್ಮಾರ್ಟ್‌ಫೋನ್ ಬಳಸದ ಜನರಿಗೆ ಇಂದಿಗೂ ನಗದು ವ್ಯವಹಾರವೇ ಅತ್ಯಂತ ಸುಲಭದ ಮಾರ್ಗವಾಗಿದೆ. ಆರ್‌ಬಿಐ ದತ್ತಾಂಶದ ಪ್ರಕಾರ, ಪ್ರಸ್ತುತ ಚಲಾವಣೆಯಲ್ಲಿರುವ ನೋಟುಗಳಲ್ಲಿ ಶೇ. 85.5 ರಷ್ಟು ಮೌಲ್ಯ 500 ರೂ. ಮುಖಬೆಲೆಯ ನೋಟುಗಳದ್ದೇ ಆಗಿದೆ.

ಇದನ್ನೂ ಓದಿ: ಮೈಮೇಲೆ ಹಸುಗಳು ಹೋದ್ರೂ ಗಾಯವೇ ಆಗಲ್ವಂತೆ!: ಉಜ್ಜಯಿನಿಯ ಈ ಹಬ್ಬದ ಬಗ್ಗೆ ಗೊತ್ತಾ? | Gaay Gohari

ಒಟ್ಟಾರೆಯಾಗಿ, ಡಿಜಿಟಲ್ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನವನ್ನು ಸುಲಭಗೊಳಿಸಿದ್ದರೂ, ಜೇಬಿನಲ್ಲಿ ನಗದು ಹಣವಿಟ್ಟುಕೊಳ್ಳುವ ಸಾಂಪ್ರದಾಯಿಕ ಚಾಳಿಯನ್ನು ಮಾತ್ರ ಇದು ಇಂದಿಗೂ ಬದಲಾಯಿಸಲು ಸಾಧ್ಯವಾಗಿಲ್ಲ.