ಮೈಮೇಲೆ ಹಸುಗಳು ಹೋದ್ರೂ ಗಾಯವೇ ಆಗಲ್ವಂತೆ!: ಉಜ್ಜಯಿನಿಯ ಈ ಹಬ್ಬದ ಬಗ್ಗೆ ಗೊತ್ತಾ? | Gaay Gohari

Gai Gohari Ritual
ಜನರ ಮೈಮೇಲೆ ಹಸುಗಳನ್ನು ಹಾಯಿಸುವ ಗಾಯ್ ಗೋಹರಿ ಆಚರಣೆ
Published on: 

Govardhana Puja: ದೇಶಾದ್ಯಂತ ದೀಪಾವಳಿಯನ್ನು ಒಂದೊಂದು ಕಡೆ ಒಂದೊಂದು ತರ ಆಚರಿಸುತ್ತಾರೆ. ಆದ್ರೆ ಮಧ್ಯಪ್ರದೇಶದ ಕೆಲವು ಹಳ್ಳಿಗಳಲ್ಲಿ ನಡೆಯುವ ಈ ಆಚರಣೆ ಮಾತ್ರ ನೋಡೋಕೆ ನಿಜಕ್ಕೂ ಬೆರಗು ಮೂಡಿಸುವಂತಿದೆ. ಅದೇ ‘ಗಾಯ್ ಗೋಹರಿ’ ಅಥವಾ ಗೋವರ್ಧನ ಪೂಜೆ.

ಪ್ರತಿ ವರ್ಷ ದೀಪಾವಳಿ ಹಬ್ಬದ ಮರುದಿನ ಬಲಿಪಾಡ್ಯಮಿ ಮತ್ತು ಗೋವರ್ಧನ ಪೂಜೆಯ ದಿನ ಬೆಳಗಿನ ಜಾವ ಮಧ್ಯಪ್ರದೇಶದ ಉಜ್ಜಯಿನಿ ಹಾಗೂ ಧಾರ್ ಜಿಲ್ಲೆಗಳಾದ ಭಿದಾವದ್ ಮತ್ತು ದಸಾಯಿ ಗ್ರಾಮಗಳಲ್ಲಿ ಈ ವಿಚಿತ್ರ ಆಚರಣೆ ನಡೆಯುತ್ತದೆ.

ಏನಿದರ ನಂಬಿಕೆ?

ಇಲ್ಲಿನ ಗ್ರಾಮಸ್ಥರು ತಮಗಿರುವ ಕಷ್ಟಗಳು ನಿವಾರಣೆಯಾಗಲಿ ಅಥವಾ ತಮ್ಮ ಹರಕೆಗಳು ಈಡೇರಲಿ ಎಂದು ಮುಂಚಿತವಾಗಿ ದೇವರಿಗೆ ಹರಕೆ ಹೊತ್ತಿರುತ್ತಾರೆ. ಹರಕೆ ಈಡೇರಿದ ನಂತರ ಭಕ್ತರು ನೆಲದ ಮೇಲೆ ಸಾಲಾಗಿ ಮಲಗುತ್ತಾರೆ. ಬಳಿಕ, ವಿಶೇಷವಾಗಿ ಆಲಂಕೃತಗೊಂಡ ಹಸು ಮತ್ತು ಹೋರಿಗಳ ಹಿಂಡನ್ನು ಅವರ ಮೈಮೇಲೆ ಓಡಿಸಲಾಗುತ್ತದೆ.

ಹಸುಗಳು ತುಳಿದರೂ ಯಾರಿಗೂ ಗಾಯವಾಗಲ್ಲ

ಹಸುಗಳ ಕಾಲಿನ ಗೊರಸುಗಳು ಮೈಮೇಲೆ ಬಿದ್ದರೆ ತಮಗೆ ಸುಖ, ಶಾಂತಿ ಮತ್ತು ಸಮೃದ್ಧಿ ಸಿಗುತ್ತದೆ ಎಂಬುದು ಇಲ್ಲಿನ ಜನರ ಗಾಢವಾದ ನಂಬಿಕೆಯಾಗಿದೆ.

ಇದನ್ನೂ ಓದಿ: ಬಾಹ್ಯಾಕಾಶದಲ್ಲಿ ಅಪರೂಪದ ವಿಸ್ಮಯ: ತಾನಾಗಿಯೇ ವೇಗ ಹೆಚ್ಚಿಸಿಕೊಂಡು ಓಡುತ್ತಿರುವ ಕ್ಷುದ್ರಗ್ರಹ! | Asteroid unexpected speed

ಸ್ಥಳೀಯರ ಪ್ರಕಾರ, ತಲೆಮಾರುಗಳಿಂದ ನಡೆದುಕೊಂಡು ಬರುತ್ತಿರುವ ಈ ಆಚರಣೆಯಲ್ಲಿ ಹಸುಗಳು ತುಳಿದರೂ ಯಾರಿಗೂ ಯಾವುದೇ ಗಂಭೀರವಾದ ಗಾಯಗಳಾಗುವುದಿಲ್ಲ. ಆದಾಗ್ಯೂ, ಇದು ಹೊರಗಿನಿಂದ ನೋಡುವವರಿಗೆ ಅತ್ಯಂತ ರೋಚಕ ಹಾಗೂ ಆತಂಕ ಮೂಡಿಸುವಂತಿದೆ.