ಬಾಹ್ಯಾಕಾಶದಲ್ಲಿ ಅಪರೂಪದ ವಿಸ್ಮಯ: ತಾನಾಗಿಯೇ ವೇಗ ಹೆಚ್ಚಿಸಿಕೊಂಡು ಓಡುತ್ತಿರುವ ಕ್ಷುದ್ರಗ್ರಹ! | Asteroid unexpected speed

Asteroid 1998 KY26 in space
ಬಾಹ್ಯಾಕಾಶದಲ್ಲಿ ವೇಗವಾಗಿ ತಿರುಗುತ್ತಿರುವ 1998 KY26 ಕ್ಷುದ್ರಗ್ರಹ
Published on: 

Dark comet theory: ಭೌತಶಾಸ್ತ್ರದ ಲೆಕ್ಕಾಚಾರಗಳನ್ನೇ ಉಲ್ಟಾಪಲ್ಟಾ ಮಾಡಿದೆ '1998 KY26' ಕ್ಷುದ್ರಗ್ರಹ.. ಸುಮಾರು 11 ಮೀಟರ್ ಅಗಲವಿರುವ ಈ ಸಣ್ಣ ಬಾಹ್ಯಾಕಾಶ ಕಲ್ಲು, ಯಾವುದೇ ಸ್ಪಷ್ಟ ಕಾರಣವಿಲ್ಲದೆ ಹಠಾತ್ತನೆ ಚುರುಕಾಗಿ ಓಡಲು ಶುರುಮಾಡಿದ್ದು ವಿಜ್ಞಾನಿಗಳನ್ನು ಅಚ್ಚರಿಗೆ ತಳ್ಳಿದೆ. ಇಷ್ಟೇ ಅಲ್ಲ, ಇದು ಪ್ರತಿ 5.35 ನಿಮಿಷಕ್ಕೊಮ್ಮೆ ಸಂಪೂರ್ಣವಾಗಿ ತನ್ನ ಕಕ್ಷೆಯಲ್ಲಿ ತಿರುಗುತ್ತದೆ.

ಕ್ಷುದ್ರಗ್ರಹಗಳು ಹಠಾತ್ತನೆ ವೇಗ ಹೆಚ್ಚಿಸಿಕೊಂಡಾಗ ವಿಜ್ಞಾನಿಗಳ ಗಮನ ‘ಡಾರ್ಕ್ ಕಾಮೆಟ್’ ಕಡೆಗೆ ಹರಿಯುತ್ತದೆ. ಅಂದರೆ, ಕ್ಷುದ್ರಗ್ರಹದ ಒಳಗಿರುವ ಮಂಜುಗಡ್ಡೆ ಕರಗಿ ಅನಿಲವಾಗಿ ರಾಕೆಟ್‌ನಂತೆ ನೂಕಲ್ಪಡುತ್ತಿರಬಹುದು ಎಂಬುದು ಇವರ ಊಹೆ.

Hayabusa-2 spacecraft
ಕ್ಷುದ್ರಗ್ರಹದ ರಹಸ್ಯ ತಿಳಿಯಲು ಪಯಣ ಬೆಳೆಸಿರುವ ಹಯಾಬುಸಾ-2 ನೌಕೆ

ಆದರೆ, 'ಐಕಾರಸ್' (Icarus) ಜರ್ನಲ್‌ನಲ್ಲಿ ಪ್ರಕಟವಾದ ಇತ್ತೀಚಿನ ಸಂಶೋಧನೆಯ ಪ್ರಕಾರ, ಈ 1998 KY26 ಕ್ಷುದ್ರಗ್ರಹದ ಮೇಲ್ಮೈ ತಾಪಮಾನವು ಅತ್ಯಂತ ಬಿಸಿಯಾಗಿದ್ದು, ಅಲ್ಲಿ ಹಿಮ ಇರಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಹೀಗಾಗಿ ಈ ವೇಗಕ್ಕೆ ಮೂಲ ಕಾರಣ ಏನೆಂಬುದು ವಿಜ್ಞಾನಿಗಳಿಗೆ ರಹಸ್ಯವಾಗಿಯೇ ಉಳಿದಿದೆ.

ಇದನ್ನೂ ಓದಿ: ಧೂಳು ಫಿಲ್ಟರ್ ಮಾಡುತ್ತೆ, ಗಾಳಿಯನ್ನೂ ಬಿಸಿ ಮಾಡುತ್ತೆ ಇದು ‘ಸೈಗಾ ಆಂಟೆಲೋಪ್’ ಪ್ರಾಣಿಯ ಮ್ಯಾಜಿಕ್ ಮೂಗು! | Saiga Antelope

ಈ ನಿಗೂಢ ಕ್ಷುದ್ರಗ್ರಹದ ನೈಜ ಸತ್ಯವನ್ನು ತಿಳಿಯಲು ಜಪಾನ್‌ನ ಬಾಹ್ಯಾಕಾಶ ಸಂಸ್ಥೆ (JAXA) ತನ್ನ 'ಹಯಾಬುಸಾ-2' (Hayabusa2) ನೌಕೆಯನ್ನು ಇದರತ್ತ ಕಳುಹಿಸಿದೆ. ಈ ನೌಕೆಯು 2031ರ ಜುಲೈ ಸುಮಾರಿಗೆ ಈ ಕ್ಷುದ್ರಗ್ರಹವನ್ನು ತಲುಪಲಿದ್ದು, ಅಲ್ಲಿಯವರೆಗೆ ಈ 1998 KY26 ಕ್ಷುದ್ರಗ್ರಹವು ವಿಜ್ಞಾನಿಗಳಿಗೆ ದೊಡ್ಡ ಕೌತುಕವಾಗಿಯೇ ಇರಲಿದೆ.