

ಚಂದ್ರಿಕಾಪ್ರಸಾದ ಸಂತೋಖಿ: ಚಾನ್ ಸಂತೋಖಿ ಎಂದೇ ಗುರುತಿಸಲಾಗುವ ಚಂದ್ರಿಕಾಪ್ರಸಾದ ಅವರು ಭಾರತದ ಮೂಲದ ಹಿಂದು ಕುಟುಂಬದಲ್ಲಿ ಸುರಿನಾಮ್ ಲೆಲಿಡ್ರಾಪ್ನಲ್ಲಿ 1959ರಲ್ಲಿ ಜನಿಸಿದರು. ಶಿಷ್ಯವೇತನದ ಮೂಲಕ ನೆದರ್ಲೆಂಡ್ನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಂಡ ನಂತರ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದರು. 1989ರಲ್ಲಿ ರಾಷ್ಟ್ರೀಯ ತನಿಖಾ ಇಲಾಖೆಯ ಮುಖ್ಯಸ್ಥರಾಗಿ ನೇಮಕಗೊಂಡರು. 2005ರಲ್ಲಿ ಪ್ರೊಗ್ರೆಸ್ಸಿವ್ ರಿಫಾಮ್ರ್ ಪಾರ್ಟಿ ವತಿಯಿಂದ ನ್ಯಾಯ ಮತ್ತು ಪೊಲೀಸ್ ಸಚಿವರಾಗಿ ನೇಮಕಗೊಂಡರು. ಅಪರಾಧ ಮತ್ತು ಡ್ರಗ್ ದಂಧೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡರು. 2011ರಲ್ಲಿ ವೂರುಇಟ್ಸೆವಿಂಡ್ರ ಹರ್ವೆಮಿಂಗ್ಸ್ ಪಾರ್ಟಿಯ (ವಿಎಚ್ಪಿ) ರಾಷ್ಟ್ರೀಯ ಅಧ್ಯಕ್ಷರಾದರು. 2020ರ ಜುಲೈ 13ರಂದು ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾದರು.