VIDEO| ಪ್ರಿಯಕರನಿಗಾಗಿ ಪಾಕ್​ಗೆ ತೆರಳಿದ್ದ ಅಂಜು ಭಾರತಕ್ಕೆ ವಾಪಸ್!

Anju Fathima
Published on

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಗಡಿಯಾಚೆಗಿನ ಪ್ರೇಮಕಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಸದ್ದು ಮಾಡಿತ್ತು. ತನ್ನ ಪ್ರಿಯಕರನಿಗಾಗಿ ಪಾಕಿಸ್ತಾನದ ಸೀಮಾ ಹೈದರ್​ ಭಾರತಕ್ಕೆ ಬಂದ ಬಳಿಕ ಅನೇಕ ಘಟನೆಗಳು ನಡೆದಿವೆ.

ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು  ತನ್ನ ಪತಿ, ಇಬ್ಬರು ಮಕ್ಕಳನ್ನು ಬಿಟ್ಟು ಪಾಕಿಸ್ತಾನಕ್ಕೆ ತೆರಳಿದ ಅಂಜು, ನಸ್ರುಲ್ಲಾ ಜೊತೆ ಮದುವೆಯಾಗಿದ್ದಳು. ಬಳಿಕ ಇಸ್ಲಾಂಗೆ ಮತಾಂತರವಾಗಿ ಫಾತಿಮಾ ಆಗಿ ಬದಲಾಗಿದ್ದಳು. ಇದೀಗ ಇದೇ ಅಂಜು ಭಾರತಕ್ಕೆ ಮರಳಿದ್ದಾಳೆ.

ಪಾಕಿಸ್ತಾನದಲ್ಲಿ ನಸ್ರುಲ್ಲಾನನ್ನು ಮದುವೆಯಾಗಿ ಫಾತಿಮಾ ಆಗಿದ್ದ ಅಂಜು ತನ್ನ ಮಕ್ಕಳನ್ನು ಭೇಟಿಯಾಗಲು ಹಂಬಲಿಸುತ್ತಿದ್ದಳು. ಇದೀಗ ಭಾರತಕ್ಕೆ ಆಗಮಿಸಿದ್ದು ತನ್ನ ಎರಡೂ ಮಕ್ಕಳೊಂದಿಗೆ ಪಾಕಿಸ್ತಾನಕ್ಕೆ ಹೋಗ್ತಾಳೋ ಇಲ್ಲವೋ ಈ ಬಗ್ಗೆ ಎರಡನೇ ಪತಿ ನಸ್ರುಲ್ಲಾ ದೊಡ್ಡ ವಿಷಯ ಬಹಿರಂಗಪಡಿಸಿದ್ದಾರೆ.

ರಾಜಸ್ಥಾನದ ಅಲ್ವಾರ್ ನಿಂದ ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ನಸ್ರುಲ್ಲಾನನ್ನು ಎರಡನೇ ಮದುವೆಯಾಗಿದ್ದ ಅಂಜು ಆರು ತಿಂಗಳ ಬಳಿಕ ಬಾಘಾ ಗಡಿ ಮೂಲಕ ತವರಿಗೆ ಮರಳಿದ್ದಾರೆ. ಭಾರತ ಪ್ರವೇಶಿಸಿ ಮಾತನಾಡಿದ ಅಂಜು ಫಾತಿಮಾ ನನಗೆ ತುಂಬಾ ಸಂತಸವಾಗುತ್ತಿದ್ದು, ಇದಕ್ಕಿಂತ ಹೆಚ್ಚಿಗೆ ಇನ್ನೇನು ಹೇಳಲಾರೆ ಎಂದು ಪ್ರತಿಕ್ರಿಯಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಂಜುಗೆ 15 ವರ್ಷದ ಮಗಳು ಮತ್ತು ಆರು ವರ್ಷದ ಮಗ ಇದ್ದಾರೆ. ಈ ವರ್ಷದ ಜೂನ್‌ನಲ್ಲಿ ಅಂಜು ಭಿವಾಡಿಯಿಂದ ಜೈಪುರಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದಳು ಎಂದು ಅರವಿಂದ್ ತಿಳಿಸಿದ್ದಾನೆ. ಆದರೆ ನಂತರ ಆತ ಪಾಕಿಸ್ತಾನದಲ್ಲಿ ಇದ್ದಾನೆ ಎಂಬ ಮಾಹಿತಿ ಮನೆಯವರಿಗೆ ಸಿಕ್ಕಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net