More

    ನನಗೆ ಅನುವಾದಕರಾಗಿ ಕೆಲಸ ಮಾಡುವುದು ಅಪಾಯಕಾರಿ: ರಾಹುಲ್​ ಗಾಂಧಿ

    ತಿರುವನಂತಪುರಂ: ಹಿಂದಿಯೇತರ ರಾಜ್ಯಗಳಲ್ಲಿ ಚುನಾವಣಾ ಪ್ರಚಾರದ ವೇಳೆ ತಲೆದೂರುವ ಅವಾಂತರಗಳ ಕುರಿತು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಮಾತನಾಡಿದ್ದು, ತಮ್ಮ ಅನುವಾದಕರಾಗಿ ಕೆಲಸ ಮಾಡುವುದು ಅತ್ಯಂತ ಅಪಾಯಕಾರಿ ಹಾಗೂ ಕಷ್ಟದ ಕೆಲಸ ಎಂದಿದ್ದಾರೆ.

    ಕೇರಳದ ಕೋಯಿಕ್ಕೋಡ್​ನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ ಚುನಾವಣಾ ಪ್ರಚಾರದ ವೇಳೆ ಭಾಷಾಂತರವು ಹೇಗೆ ಸಮಸ್ಯೆಯನ್ನುಂಟು ಮಾಡಿತ್ತು ಎಂಬುದರ ಕುರಿತು ಮಾತನಾಡಿದ್ದಾರೆ.

    ಇದನ್ನೂ ಓದಿ: ವೈಟ್​ಬಾಲ್​ ಕ್ರಿಕೆಟ್​ನಿಂದ ದೂರ ಉಳಿಯಲಿದ್ದಾರೆಯೇ ಕಿಂಗ್ ಕೊಹ್ಲಿ?

    ತೆಲಂಗಾಣ ಚುನಾವಣೆ ಪ್ರವಾರದ ವೇಳೆ ನಾನು ಹಿಂದಿಯಲ್ಲಿ ಮಾತನಾಡಿದಾಗ ಅವರು ತೆಲುಗಿನಲ್ಲಿ ಭಾಷಾಂತರ ಮಾಡುತ್ತಿದ್ದರು. ನಾನು ಚಿಕ್ಕದಾಗಿ ಹೇಳಿದರು ಅಲ್ಲಿ ಬೇರೆ ಏನನ್ನೋ ಹೇಳಲಾಗುತ್ತಿತ್ತು. ಇದನ್ನು ಅರಿತ ನಾನು ಪದಗಳ ಲೆಕ್ಕ ಇಡಲು ಶುರು ಮಾಡಿದೆ. ನಾನು ಐದು ಪದಗಳಲ್ಲಿ ಒಂದು ವಾಕ್ಯ ಮುಗಿಸಿದರೆ ನನ್ನ ಪರವಾಗಿ ಭಾಷಾಂತರ ಮಾಡುತ್ತಿದ್ದವರು 25-30 ಪದಗಳಲ್ಲಿ ಅದನ್ನು ಹೇಳುತ್ತಿದ್ದರು.

    ಕೆಲವೊಂದು ಬಾರಿ ನಾನು ನೀರಸವಾಗಿರುವ ವಿಚಾರ ಏನಾದರೂ ಹೇಳಿದರೆ ಜನರು ಹುಚ್ಚೆದ್ದು ಕುಣಿಯುತ್ತಾರೆ. ಇನ್ನು ಕೆಲವೊಮ್ಮೆ ಒಳ್ಳೆಯ ವಿಚಾರ ಹೇಳಿದರೆ ಅದಕ್ಕೆ ನೀರಸ ಪ್ರತಿಕ್ರಿಯೆ ನೀಡುತ್ತಾರೆ. ಇದು ನನಗೆ ತುಂಬಾ ನಗು ತರಿಸುತ್ತದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಭಾಷಾಂತರದ ಕುರಿತು ತಮ್ಮಗಾದ ಅನುಭವವನ್ನು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಂಚಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts