More

    VIDEO| ಮೆಟ್ರೋ ಹಳಿ ದಾಟಲು ಹೋಗಿ ವ್ಯಕ್ತಿ ಮೃತ್ಯು; ಅವಸರವೇ ಇದಕ್ಕೆಲ್ಲಾ ಕಾರಣ ಎಂದ ಸಿಬ್ಬಂದಿ

    ನವದೆಹಲಿ: ಇತ್ತೀಚಿನ ದಿನಗಳಲ್ಲಿ ರಾಷ್ಟ್ರರಾಜಧಾನಿ ನವದೆಹಲಿಯ ಜೀವನಾಡಿ ಎಂದೇ ಖ್ಯಾತಿ ಪಡೆದಿರುವ ಮೆಟ್ರೋ ರೈಲು ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದ್ದು, ಸದಾ ಚರ್ಚೆಗೆ ಗ್ರಾಸವಾಗಿರುತ್ತದೆ. ಇದೀಗ ಹಳಿ ದಾಟಲು ಹೋಗಿ ವ್ಯಕ್ತಿಯೊಬ್ಬರು ರೈಲಿನಡಿ ಸಿಲುಕಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

    ಯೆಲ್ಲೋ ಲೇನ್​ನಲ್ಲಿ ಈ ಘಟನೆ ನಡೆದಿದ್ದು, ಇದರ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಮೃತರನ್ನು ಉತ್ತರಪ್ರದೇಶದ ಕಾನ್ಪುರ ಮೂಲದ ಬುರಾ ಸಿಂಗ್​ (40) ಎಂದು ಗುರುತಿಸಲಾಗಿದೆ.

    ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ; ರಕ್ಷಣಾ ತಂಡ, ಕಾರ್ಮಿಕರನ್ನು ಶ್ಲಾಘಿಸಿದ ಪ್ರಧಾನಿ

    ಈ ಕುರಿತು ಪ್ರತಿಕ್ರಿಯಿಸಿರುವ DMRCಯ ಹಿರಿಯ ಅಧಿಕಾರಿಯೊಬ್ಬರು, ಬುರಾ ಸಿಂಗ್ ಛತ್ತರ್​ಪುರ ಮೆಟ್ರೋ ಸ್ಟೇಷನ್​ನಲ್ಲಿ ಇಳಿದ ಬಳಿಕ ಮತ್ತೊಂದು ರೈಲನ್ನು ಹತ್ತಬೇಕಿತ್ತು. ತಡವಾಗಿದರಿಂದ ಆತ ಆತುರದಲ್ಲಿ ಹಳಿಯನ್ನು ದಾಟಲು ಮುಂದಾಗಿದ್ದಾನೆ. ಈ ವೇಳೆ ಎದುರಿನಿಂದ ಬಂದ ರೈಲು ಆತನಿಗೆ ಗುದಿದ್ದು, ಪ್ಲಾಟ್​ಫಾರ್ಮ್​ ಹಾಗೂ ರೈಲಿನ ನಡುವೆ ಸಿಲುಕಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ಸಮಯ ಉಳಿಸಲು ಹೋಗಿ ವ್ಯಕ್ತಿಯೊಬ್ಬರು ತಮ್ಮ ಜೀವವನ್ನು ಕಳೆದುಕೊಂಡಿರುವುದು ದುರದೃಷ್ಟಕರ ಸಂಗತಿಯಾಗಿದೆ. ಈ ಸಂಬಂಧ ಮೆಟ್ರೋ ನಿಲ್ದಾಣಗಳಲ್ಲಿ ಸೆಕ್ಯೂರಿಟಿಗಳನ್ನು ಮತ್ತಷ್ಟು ಹೆಚ್ಚಿಸಲಾಗಿದ್ದು ಈ ರೀತಿಯ ಘಟನೆಗಳು ಮರುಕಳಿಸದಂತೆ ಮುಂಜಾಗ್ರತ ಕ್ರಮ ವಹಿಸಲಾಗುವುದು ಎಂದು DMRCಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts