ಭಾರತದ ಸರ್ಫಿಂಗ್ ಕ್ರೀಡೆಗೆ ಕೊಡುಗೆ ನೀಡಿದ ಸರ್ಫಿಂಗ್ ಸ್ವಾಮಿ ಇನ್ನಿಲ್ಲ

SURFING
Published on

ಮಂಗಳೂರು: ಭಾರತೀಯ ಸರ್ಫಿಂಗ್ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಸರ್ಫಿಂಗ್ ಸ್ವಾಮಿ ಎಂದೇ ಕರೆಯಲ್ಪಡುತ್ತಿದ್ದ ಸ್ವಾಮಿ ನರಸಿಂಹ ಮೃತರಾಗಿದ್ದಾರೆ.

ಮಂಗಳೂರು ಮೂಲ್ಕಿ ಸಮೀಪದ ಕೊಳಚೆಕಂಬ್ಳ ಎಂಬಲ್ಲಿ ಮಂತ್ರ 2004ರಲ್ಲಿ ಸರ್ಫಿಂಗ್ ಕ್ಲಬ್ ಹುಟ್ಟು ಹಾಕಿದ್ದ ಅವರು ಭಾರತದಲ್ಲಿ ಸರ್ಫಿಂಗ್ ಕ್ರೀಡೆಯಾಗಿ ಬೆಳೆಯುವುದಕ್ಕೆ ಕಾರಣಕರ್ತರಾಗಿದ್ದರು.

ಮೂಲತಃ ಅಮೆರಿಕದವರಾಗಿದ್ದ ಸರ್ಫಿಂಗ್ ಸ್ವಾಮಿ ಅವರ ಮೂಲ ಹೆಸರು ಜಾಕ್ ಹೆಬ್ನರ್. 2014ರಲ್ಲಿ ಸರ್ಫಿಂಗ್ ಸ್ವಾಮಿ ಪ್ರತಿಷ್ಠಾನವನ್ನು ತಮ್ಮದೇ ಅನುದಾನದಿಂದ ಕಟ್ಟಿದವರು.

ಅಲ್ಲದೆ ಭಾರತೀಯ ಸರ್ಫಿಂಗ್ ಫೆಡರೇಶನ್ ಕೂಡಾ ಹುಟ್ಟುಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net