ಯೂಕ್ರೇನ್​ನಲ್ಲಿ ಸಿಲುಕಿದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ; 296 ಮಂದಿ ಭಾರತದತ್ತ ಪಯಣ..

Bus 2
Published on

ಬಾಗಲಕೋಟೆ/ಬೀದರ್​: ರಷ್ಯಾ ದಾಳಿಯಿಂದ ತತ್ತರಿಸಿರುವ ಯೂಕ್ರೇನ್​ನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ತಲುಪಿಸಲು ಬಸ್ ವ್ಯವಸ್ಥೆಯಾಗಿದೆ.

ಖಾರ್ಕೀವ್ ಬಳಿಯ ಪೆಸೊಚಿನ್ ಪ್ರದೇಶದಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಸೇರಿದ 37 ಮಂದಿಯೂ ಸೇರಿದಂತೆ ಭಾರತದ 296 ವಿದ್ಯಾರ್ಥಿಗಳು ಬಸ್​​ನಲ್ಲಿ ಹೊರಟಿದ್ದು, ಲೆವಿವ್ ತಲುಪಿ ನಂತರ ಪೊಲ್ಯಾಂಡ್ ಅಥವಾ ರೊಮೇನಿಯಾ ಮಾರ್ಗವಾಗಿ ಭಾರತವನ್ನು ಸೇರಲಿದ್ದಾರೆ.

ಬೀದರನಿಂದ ಯೂಕ್ರೇನ್​ಗೆ ಎಂಬಿಬಿಎಸ್​ ವ್ಯಾಸಂಗಕ್ಕಾಗಿ ಹೋಗಿದ್ದ ಶಶಾಂಕ, ವಿವೇಕ ಹಾಗೂ ಬಾಗಲಕೋಟೆಯ ಕಿರಣ ಸವದಿ ಸೇರಿ 296 ಜನ ಭಾರತೀಯರು ಬಸ್ ಮೂಲಕ ಯೂಕ್ರೇನ್​ನಿಂದ ಭಾರತದತ್ತ ಹೊರಟಿದ್ದಾರೆ.

ರಾಜ್ಯ ಹಾಗೂ ಭಾರತದ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಿಶಾಚಿನ್​ನಲ್ಲಿದ್ದು, ಅಲ್ಲಿಂದ ಹೀಗೆ ಐದು ಬಸ್​ಗಳಲ್ಲಿ ವಿದ್ಯಾರ್ಥಿಗಳು ಹೊರಟಿದ್ದು, ಅವರಲ್ಲೊಬ್ಬರಾಗಿರುವ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ನಿವಾಸಿ ಕಿರಣ ವಿಡಿಯೋ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net