

ಮುಂಬೈ: ಭಾರತೀಯ ಷೇರು ಮಾರುಕಟ್ಟೆ ಹೊಸ ಇತಿಹಾಸ ಸೃಷ್ಟಿಸಿ ಮಾಡಿದ್ದು. ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ ದಾಖಲೆಯ 64,550 ಮತ್ತು ನಿಫ್ಟಿ 19,150 ಅಂಕಗಳ ಗಡಿ ದಾಟಿದೆ. ಪ್ರಸ್ತುತ, ಎರಡೂ ಸೂಚ್ಯಂಕಗಳು ಮಾರುಕಟ್ಟೆಯಲ್ಲಿ ಭಾರಿ ನಡೆಸುತ್ತಿವೆ.
ತಂತ್ರಜ್ಞಾನ, ಫಾರ್ಮಾ, ಬ್ಯಾಂಕ್‌ಗಳು, ಹಣಕಾಸು ಮತ್ತು ಆಟೋಮೊಬೈಲ್ ಷೇರುಗಳಲ್ಲಿನ ಲಾಭಗಳು ಈ ಏರಿಕೆಗೆ ಬೆಂಬಲ ನೀಡಿದ್ದು, ದೇಶೀಯ ಷೇರುಪೇಟೆಗಳು ಕೂಡ ಏರಿಕೆ ಕಂಡಿವೆ, ಇನ್ಫೋಸಿಸ್, ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ರಿಲಯನ್ಸ್ ಇಂಡಸ್ಟ್ರೀಸ್ನಂತಹ ಷೇರುಗಳ ಸೂಚ್ಯಂಕಗಳು ಕೂಡ ಹೆಚ್ಚಳ ಕಂಡಿವೆ.
ಇದನ್ನೂ ಓದಿ: VIDEO| ಬೀದಿನಾಯಿಗೆ ಸೀಮಂತ ಮಾಡಿದ ಸ್ನೇಹಿತರು
ಭಾರತೀಯ ಷೇರು ಮಾರುಕಟ್ಟೆ ಪಾಲಿಗೆ ಇಂದು ಅತ್ಯುತ್ತಮ ದಿನವಾಗಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿಗಳು ತಮ್ಮ ಗರಿಷ್ಠ ಮಟ್ಟವನ್ನು ದಾಟಿವೆ. ಬಿಎಸ್‌ಇ ಸೆನ್ಸೆಕ್ಸ್ ಪ್ಯಾಕ್ ಇಂದು 650 ಪಾಯಿಂಟ್‌ಗಳಿಗಿಂತ ಹೆಚ್ಚು ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 64,594ಕ್ಕೆ ತಲುಪಿದ್ದು, ಎನ್‌ಎಸ್‌ಇ ನಿಫ್ಟಿ ಸೂಚ್ಯಂಕ 150 ಪಾಯಿಂಟ್‌ಗಳ ಜಿಗಿತ ಕಂಡು ಗರಿಷ್ಠ 19,160ಗೆ ತಲುಪಿದೆ. ಇಂದು ಮುಂಬೈ ಮಾರುಕಟ್ಟೆ ಬಂಡವಾಳವನ್ನು ನೋಡಿದಾಗ ಷೇರುಗಳಲ್ಲಿ 3.91 ಲಕ್ಷ ಕೋಟಿ ರೂ. ಏರಿಕೆಯಾಗಿದೆ.
ಜತೆಗೆ ಮಂಗಳವಾರ ದಾಖಲಾದ ಷೇರುಗಳ ಮೌಲ್ಯ 292.13 ಲಕ್ಷ ಕೋಟಿ ರೂ. ಆಗಿದ್ದು, ಇದು ಬಿಎಸ್‌ಇ ಎಂ-ಕ್ಯಾಪ್ ಪಟ್ಟಿಯ ಪ್ರಕಾರ ಹೂಡಿಕೆದಾರರ ಸಂಪತ್ತು ಇಂದು ಸುಮಾರು 3.91 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡು 296.03 ಲಕ್ಷ ಕೋಟಿ ರೂ.ಗೆ ಮೌಲ್ಯವನ್ನು ತಲುಪಿದೆ.
ಇದನ್ನೂ ಓದಿ: ಸಲಾಂ ಟೇಕಡಿ ಬಳಿಯ ಕುಡಿಯುವ ನೀರು ಶುದ್ಧೀಕರಣ ಘಟಕ ಕಾಮಗಾರಿ ಡಿಸಿ ಪಾಲಿಕೆ ಆಯುಕ್ತರಿಂದ ಪರಿಶೀಲನೆ
3,569 ಷೇರುಗಳ ಪೈಕಿ 1,983 ಷೇರುಗಳು ಮುನ್ನಡೆ ಕಂಡಿವೆ. 1,427 ಷೇರುಗಳು ಇಳಿಕೆಯಾಗಿದ್ದರೆ, 159 ಷೇರುಗಳು ಬದಲಾಗದೆ ಉಳಿದಿವೆ. ನಿಪ್ಪಾನ್ ಲೈಫ್ ಇಂಡಿಯಾ ಅಸೆಟ್ ಮ್ಯಾನೇಜ್‌ಮೆಂಟ್, ಎಚ್‌ಡಿಎಫ್‌ಸಿ ಎಎಂಸಿ, ಯುಟಿಐ ಎಎಂಸಿ, ಸೆಂಚುರಿ ಟೆಕ್ಸ್‌ಟೈಲ್ಸ್, ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್, ಬಯೋಕಾನ್ ಮತ್ತು ಫಿನೋಲೆಕ್ಸ್ ಕೇಬಲ್‌ಗಳಂತಹ ಶೇರುಗಳು ಶೇ.20ರಷ್ಟು ಏರಿಕೆ ಕಂಡಿವೆ. ಅಲ್ಲದೆ, ಮಿಶ್ರಾ ಧಾತು ನಿಗಮ್, ಎನ್‌ಎಲ್‌ಸಿ ಇಂಡಿಯಾ ಮತ್ತು ಇಂಡಿಯನ್ ಬ್ಯಾಂಕ್ ಷೇರುಗಳು ಶೇ.4.47ಕ್ಕೆ ಏರಿದೆ. (ಏಜೆನ್ಸೀಸ್)