

Dog suitcase : ಅನೇಕ ಜನರು ಸಾಕುಪ್ರಾಣಿಗಳನ್ನು ಪ್ರೀತಿಸುತ್ತಾರೆ. ಕೆಲವರು ಬೆಕ್ಕು,ನಾಯಿ, ಅಳಿಲು, ಮೊಲಗಳನ್ನೂ ಸಾಕುವುದನ್ನುನೋಡುತ್ತಿರುತ್ತೇವೆ. ತಮ್ಮ ಕುಟುಂಬದ ಸದಸ್ಯರಂತೆ ಪರಿಗಣಿಸುತ್ತಾರೆ ಮತ್ತು ಪ್ರೀತಿಸುತ್ತಾರೆ. ಅವರು ತಮ್ಮ ಸಾಕುಪ್ರಾಣಿಗಳಿಗೆ ದುಬಾರಿ ಆಹಾರ, ಆರಾಮದಾಯಕವಾದ ಹಾಸಿಗೆ ಮತ್ತು ಸೋಫಾವನ್ನು ಸಹ ಖರೀದಿಸುತ್ತಾರೆ. ಅಲ್ಲದೆ ಒಬ್ಬ ವ್ಯಕ್ತಿಯು ತನ್ನ ಸಾಕುಪ್ರಾಣಿಗಾಗಿ 14 ಲಕ್ಷ ಮೌಲ್ಯದ ಬೋನ್ ಟ್ರಂಕ್ ಎಂಬ ಲೂಯಿ ವಿಟಾನ್ ನಾಯಿ ಸೂಟ್‌ಕೇಸ್ ಖರೀದಿಸುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಡಾ. ಮಲ್ಟಿಮೀಡಿಯಾ ಸಿಇಒ ಅಜಯ್ ಠಾಕೂರ್ ಅವರು ತಮ್ಮ ನಾಯಿಗಾಗಿ ಬೋನ್ ಟ್ರಂಕ್ ಎಂಬ ಲೂಯಿ ವಿಟಾನ್ ಬ್ರಾಂಡ್‌ನಿಂದ ದುಬಾರಿ ಸೂಟ್‌ಕೇಸ್ ಖರೀದಿಸಿದ ವೀಡಿಯೊವನ್ನು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಅವರು ಲೂಯಿ ವಿಟಾನ್ ಅಂಗಡಿಗೆ ಹೋಗಿ ನನ್ನ ನಾಯಿಗಾಗಿ ಕೆಲವು ವಸ್ತುಗಳನ್ನು ಖರೀದಿಸಲು ಬಯಸುತ್ತಾರೆ ಎಂದು ಹೇಳುತ್ತಾರೆ.
ನಾಯಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಮೂಳೆಯ ಆಕಾರದ ಹಾರ್ಡ್ ಶೆಲ್ ಸೂಟ್ಕೇಸ್ ಅನ್ನು ತೋರಿಸಿದರು.. ಈ ಸೂಟ್ಕೇಸ್ ಪಾಲಿಶ್ ಮಾಡಿದ ಮರದ ಟ್ರೇ ಮತ್ತು ಎರಡು ಬೌಲ್ಗಳೊಂದಿಗೆ ಬರುತ್ತದೆ. ಅಜಯ್ ಖರೀದಿಸಿದ ಸೂಟ್‌ಕೇಸ್ ಐಷಾರಾಮಿ ಬ್ರಾಂಡ್ ಲೂಯಿ ವಿಟಾನ್‌ಗೆ ಸೇರಿದೆ. ಕಂಪನಿ ಅದಕ್ಕೆ ‘ಬೋನ್ ಟ್ರಂಕ್’ ಎಂದು ಹೆಸರಿಟ್ಟಿದೆ. ಇದು ಮೂಳೆಯ ಆಕಾರದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಸೂಟ್ಕೇಸ್ ಆಗಿದೆ.
ಈ ಲೂಯಿ ವಿಟಾನ್ ಬೋನ್ ಟ್ರಂಕ್ ಬೆಲೆ 14 ಲಕ್ಷ ರೂ. ಈ ವೀಡಿಯೋ ನೋಡಿದ ಕೆಲವರು ಅವರ ನಿರ್ಧಾರವನ್ನು ಶ್ಲಾಘಿಸಿ, ಅವರು ತಮ್ಮ ಮುದ್ದಿನ ಪ್ರಾಣಿಯನ್ನು ತುಂಬಾ ಪ್ರೀತಿಸುತ್ತಾರೆ ಎಂದು ಕಾಮೆಂಟ್ ಮಾಡಿದ್ದಾರೆ.