ಕೊರೊನಾ ವೈರಸ್ ಆತಂಕ: ಯುಎಇನಲ್ಲಿ ಭಾರತೀಯರೊಬ್ಬರಿಗೆ ತಗುಲಿದೆ ಸೋಂಕು

corona 8 pass
Published on

ದುಬೈ: ಯುಎಇನಲ್ಲಿ ಇರುವ ಭಾರತೀಯರೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಇದರೊಂದಿಗೆ ಯುಎಇನಲ್ಲಿ ಸೋಂಕು ಪೀಡಿತರ ಸಂಖ್ಯೆ 8ಕ್ಕೆ ಏರಿಕೆ ಆಗಿದೆ ಎಂದು ಯುಎಇ ಆರೋಗ್ಯ ಸಚಿವಾಲಯ ಹೇಳಿದೆ.

ಚೀನಾದ ಕೊರೊನಾ ವೈರಸ್​ ಪೀಡಿತರಾಗಿ ಸಾವನ್ನಪ್ಪಿದವರ ಸಂಖ್ಯೆ 1,016ಕ್ಕೆ ಏರಿಕೆಯಾಗಿದೆ. ಸೋಂಕುಪೀಡಿತ ಚೀನಿಯರ ಸಂಖ್ಯೆ 42,638ಕ್ಕೆ ಏರಿದೆ. ಭಾರತೀಯರೊಬ್ಬರಿಗೆ ಸೋಂಕು ತಗುಲಿರುವುದು ಸೋಮವಾರ ಪತ್ತೆಯಾಗಿದೆ. ಯುಎಇಯಲ್ಲಿ ಇದು ಎಂಟನೇ ಪ್ರಕರಣವಾಗಿದೆ. ಇನ್ನೆರಡು ಪ್ರಕರಣ ಶನಿವಾರ ಪತ್ತೆಯಾಗಿತ್ತು. ಅದರಲ್ಲಿ ಒಬ್ಬ ಚೀನೀ ಪ್ರಜೆಯಾಗಿದ್ದರೆ, ಇನ್ನೊಬ್ಬ ಫಿಲಿಪ್ಪೀನ್ಸ್​ನ ಪ್ರಜೆ.

ಕಳೆದ ವಾರ ವುಹಾನ್​ಗೆ ಪ್ರವಾಸ ಹೋಗಿ ವಾಪಸ್ ಬಂದಿದ್ದ ಒಂದು ಕುಟುಂಬದ ನಾಲ್ವರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ದುಬೈ ವಿಮಾನ ನಿಲ್ದಾಣದಲ್ಲಿ ಸೋಂಕು ಪತ್ತೆ ಪರೀಕ್ಷೆಗೆ ಒಳಗಾದಾಗ ಈ ವಿಚಾರ ಬಹಿರಂಗವಾಗಿತ್ತು. ಐದನೇ ಪ್ರಕರಣವೂ ಚೀನಾದಿಂದ ಬಂದ ವ್ಯಕ್ತಿಯದ್ದೇ ಆಗಿದೆ. ಎಲ್ಲರ ಆರೋಗ್ಯವೂ ಸ್ಥಿರವಾಗಿದೆ. ಚಿಕಿತ್ಸೆ ಮುಂದುವರಿದಿದೆ ಎಂದು ಸಚಿವಾಲಯ ಹೇಳಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net