ಆಶ್ಲೀಲ ಸಂಭಾಷಣೆ ಆಡಿಯೋ ಲೀಕ್ ಬೆನ್ನಲೇ ವಿಷ ಸೇವಿಸಿದ ಕ್ರಿಕೆಟ್‌ ಕೋಚ್!

Cricket
Published on

ಉತ್ತರಾಖಂಡ : ಮಹಿಳಾ ಕ್ರಿಕೆಟ್​​ ಆಟಗಾರ್ತಿಯರೊಂದಿಗೆ ಆಶ್ಲೀಲವಾಗಿ ಮಾತನಾಡಿದ ಆಡಿಯೋ ವೈರಲ್‌ ಆದ ಬೆನ್ನಲ್ಲೇ ಕ್ರಿಕೆಟ್‌ ತರಬೇತುದಾರರೊಬ್ಬರು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಉತ್ತರಾಖಂಡ್​ನ ಕ್ರಿಕೆಟ್‌ ಅಕಾಡೆಮಿಯೊಂದರಲ್ಲಿ ತರಬೇತು ನೀಡುವ ನರೇಂದ್ರ ಶಾ ತರಬೇತಿ ಕೇಂದ್ರಕ್ಕೆ ಬರುವ ಮಹಿಳಾ ಆಟಗಾರ್ತಿಯೊಬ್ಬಳ ಜೊತೆಗೆ ಅಶ್ಲೀಲ ಭಾಷೆ ಮತ್ತು ಆಕೆಯ ಜಾತಿಯ ಬಗ್ಗೆ ನಿಂದನೀಯ ಪದಗಳನ್ನು ಬಳಸಿದ್ದಾರೆ. ಈ ಕುರಿತ ಆಡಿಯೋ ಹೊರಬಂದು ವೈರಲ್‌ ಆಗಿದೆ.

ಯುವತಿ ಮನೆಯವರು ಪೊಲೀಸರಲ್ಲಿ ದೂರು ನೀಡಿದ್ದಾರೆ. ಈ ಹಿಂದೆಯೂ ಕೋಚ್‌ ನರೇಂದ್ರ ಅವರ ವಿರುದ್ಧ ಬೇರೆ ಮಹಿಳಾ ಆಟಗಾರ್ತಿಯರು ಕೂಡ ದೂರು ನೀಡಿದ್ದರು. ದೂರು ದಾಖಲಾಗುತ್ತಿದ್ದಂತೆ ನರೇಂದ್ರ ಶಾ ವಿಷ ಸೇವಿಸಿದ್ದಾರೆ. ಇವರನ್ನು ಡೆಹ್ರಾಡೂನ್‌ನ ಡೂನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಶ್ಲೀಲ ಆಡಿಯೋ ಬಿಡುಗಡೆಯಾದ ನಂತರ ಡೆಹ್ರಾಡೂನ್ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಮತ್ತು ನರೇಂದ್ರ ಶಾ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net