ಭಾರತ ಸಂವಿಧಾನ ವಿಶ್ವಕ್ಕೆ ಮಾದರಿ

kdr ambedkar photo
ಕಡೂರು ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಡಿಎಸ್‌ಎಸ್ ಸಂಘಟನೆಯಿಂದ ಡಾ. ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಕೆ.ಎಸ್.ಆನಂದ್, ಭಂಡಾರಿ ಶ್ರೀನಿವಾಸ್, ಶಂಕರ್, ಲಕ್ಷ್ಮಣ್, ಟಿ.ಮಂಜಪ್ಪ, ಸಂತೋಷ್, ಯಾಸೀನ್ ಮತ್ತಿತರಿದ್ದರು.
Published on

ಕಡೂರು: ಪ್ರತಿಯೊಬ್ಬರಿಗೂ ಸಮಾನತೆಯನ್ನು ನೀಡಿರುವ ಅಂಬೇಡ್ಕರ್ ಅವರು ರಚಿಸಿದ ಭಾರತದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿಯಾಗಿದೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭಾನುವಾರ ಡಿಎಸ್‌ಎಸ್ ಸಂಘಟನೆಯಿಂದ ಸರಳವಾಗಿ ಆಚರಿಸಿದ ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿದರು.
ದೇಶದಲ್ಲಿ ವಿವಿಧ ಭಾಷೆ, ಧರ್ಮ ಮತ್ತು ಜಾತಿಗಳ ಒಳಗೊಂಡ ಏಕತೆಯ ವ್ಯವಸ್ಥೆಗೆ ಸಮಾನತೆ ನೀಡುವ ಉದ್ದೇಶದಿಂದ ಸಂವಿಧಾನವನ್ನು ರಚಿಸಿ ದೇಶಕ್ಕೆ ಅರ್ಪಿಸಿದ್ದಾರೆ. ಆದರೆ ಅದರ ವ್ಯವಸ್ಥೆಗೆ ಅಪತ್ತು ಎದುರಾಗುತ್ತಿರುವುದು ಕಳವಳಕಾರಿ ಸಂಗತಿ. ಈ ನಿಟ್ಟಿನಲ್ಲಿ ಸಂವಿಧಾನ ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ. ಎಲ್ಲ ಗ್ರಂಥಗಳಿಗಿಂತ ಭಾರತದ ಸಂವಿಧಾನ ಪವಿತ್ರವಾಗಿದೆ ಎಂದರು.
ಪುರಸಭಾ ಸದಸ್ಯ ಭಂಡಾರಿ ಶ್ರೀನಿವಾಸ್ ಮಾತನಾಡಿ, ಅಂಬೇಡ್ಕರ್ ಅವರ ಕೊಡುಗೆ ದೇಶಕ್ಕೆ ಅಪಾರವಾಗಿದೆ. ಸರ್ವರಿಗೂ ಸಮಪಾಲು, ಬಡವ ಶ್ರೀಮಂತ ಎಂಬ ಭೇದಭಾವವಿಲ್ಲದೆ ಪ್ರತಿಯೊಬ್ಬರು ಸಮಾನವಾಗಿ ಬದುಕಬೇಕಿದೆ ಎಂಬುದನ್ನು ತೋರಿಸಿಕೊಟ್ಟವರು ಅಂಬೇಡ್ಕರ್. ದೇಶದಲ್ಲಿ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗಗಳ ಅಡಿಯಲ್ಲಿ ಆಡಳಿತ ಒಳಗೊಂಡಿದೆ. ಅಂಬೇಡ್ಕರ್ ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಪುರಸಭಾ ಸದಸ್ಯ ಸೈಯಾದ್ ಯಾಸೀನ್, ಡಿಎಸ್‌ಎಸ್ ಮುಖಂಡರಾದ ಶಂಕರ್, ಟಿ.ಮಂಜಪ್ಪ, ಲಕ್ಷ್ಮಣ್, ಬಳ್ಳೇಕೆರೆ ಸಂತೋಷ್, ಜಯಣ್ಣ, ಕೆ.ಜಿ.ಶ್ರೀನಿವಾಸ್ ಮೂರ್ತಿ, ಇಮ್ರಾನ್ ಖಾನ್, ಮಹ್ಮದ್ ಸಮೀಉಲ್ಲಾ, ರಾಮಚಂದ್ರಪ್ಪ, ಪ್ರಮೋದ್, ಕೃಷ್ಣಪ್ಪ, ಮಲ್ಲಿದೇವಿಹಳ್ಳಿ ಶ್ರೀನಿವಾಸ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net