ಅಮೆರಿಕಕ್ಕೆ ಭಾರತದಿಂದ 35 ಲಕ್ಷ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ

Tablet
Published on

ಕರೊನಾಗೆ ಸದ್ಯ ಪರಿಣಾಮಕಾರಿ ಔಷಧ ಹೈಡ್ರಾಕ್ಸಿಕ್ಲೋರೊಕ್ವಿನ್. ಭಾರತ ಕಳಿಸಿರುವ ಮೊದಲ ಹಂತದ ಔಷಧ ಅಮೆರಿಕಕ್ಕೆ ಶನಿವಾರ ಆಗಮಿಸಿದೆ ಎಂದು ವಾಷಿಂಗ್ಟನ್​ನ ಭಾರತದ ರಾಯಭಾರಿ ತರಂಜಿತ್ ಸಿಂಗ್ ಸಂಧು ಹೇಳಿದ್ದಾರೆ.

ಮಲೇರಿಯಾಕ್ಕೆ ಬಳಸುವ ಈ ಮಾತ್ರೆಯಿಂದ ಕೋವಿಡ್-19 ರೋಗಿಗಳಿಗೆ ತಸು ಶಮನ ದೊರೆಯುತ್ತಿದೆ. ಹೀಗಾಗಿ ಮಾನವೀಯ ದೃಷ್ಟಿಯಿಂದ ಈ ಮಾತ್ರೆಯ ಮೇಲಿದ್ದ ರಫ್ತು ನಿಷೇಧವನ್ನು ಭಾರತ ಸರ್ಕಾರ ಭಾಗಶಃ ಸಡಿಲಿಸಿದೆ.

ಪ್ರಧಾನಿ ನರೇಂದ್ರ ಮೋದಿ ಜತೆ ಕಳೆದ ವಾರ ದೂರವಾಣಿಯಲ್ಲಿ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ಪೂರೈಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ್ದ ಭಾರತ, 2.90 ಕೋಟಿ ಮಾತ್ರೆ ರಫ್ತು ಮಾಡಲಾಗುವುದೆಂದು ಹೇಳಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net