ಎಲ್​ಎಸಿ ದಾಟಿದರೆ ಗುಂಡೇಟು

LOC
Published on

ನವದೆಹಲಿ: ಪೂರ್ವ ಲಡಾಖ್​ನ ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್​ಎಸಿ) ಉಲ್ಲಂಘಿಸಿದರೆ ಗುಂಡೇಟು ನಿಶ್ಚಿತ ಎಂದು ಚೀನಾಕ್ಕೆ ಭಾರತ ಖಡಕ್ ಎಚ್ಚರಿಕೆ ನೀಡಿದೆ. ಚೀನಾ ಪೀಪಲ್ಸ್ ಲಿಬರೇಷನ್ ಸೇನೆಯು ಗಡಿಯಲ್ಲಿ ಶಾಂತಿ, ಸ್ಥಿರತೆ ಕಾಯ್ದುಕೊಳ್ಳುವ ಒಪ್ಪಂದವನ್ನು ಗೌರವಿಸುತ್ತಿಲ್ಲ.

ಉದ್ವಿಗ್ನತೆ ಕಡಿಮೆ ಮಾಡಲು ಗಡಿಯಿಂದ ಸೇನೆ ಹಿಂಪಡೆಯಬೇಕು ಎಂಬ ಮಾತುಕತೆಯ ಕರಾರನ್ನೂ ಲೆಕ್ಕಿಸುತ್ತಿಲ್ಲ. ಹೀಗಾಗಿ ಚೀನಾ ಯೋಧರು ಎಲ್​ಎಸಿ ದಾಟಿದರೆ ಗುಂಡು ಹಾರಿಸಲಾಗುವುದು. ಇದು ಆತ್ಮರಕ್ಷಣೆಯೇ ಹೊರತು ಆಕ್ರಮಣವಲ್ಲ ಎಂದು ಸರ್ಕಾರದ ಮೂಲಗಳು ಸ್ಪಷ್ಟಪಡಿಸಿವೆ. ಈ ವಿಚಾರವನ್ನು ಕಳೆದ ವಾರ ನಡೆದ ಸೇನಾಧಿಕಾರಿಗಳ 6ನೇ ಸುತ್ತಿನ ಮಾತುಕತೆಯಲ್ಲೂ ಹೇಳಿತ್ತು. ಜೂ.15ರಂದು ಗಲ್ವಾನ್ ಕಣಿವೆಯಲ್ಲಿ ಘರ್ಷಣೆ ನಡೆದ ಬಳಿಕ ಸರ್ಕಾರ ಈ ತೀರ್ವನಕ್ಕೆ ಬಂದಿತ್ತು. ಆದರೆ, ಜಾರಿ ಮಾಡಿರಲಿಲ್ಲ. ಇತ್ತೀಚೆಗೆ ಪ್ಯಾಂಗಾಂಗ್ ತ್ಸೊ ಸರೋವರದಲ್ಲಿ ಚೀನಿ ಸೇನೆ ಅತಿಕ್ರಮಿಸಲು ಮುಂದಾದಾಗ ಗುಂಡು ಹಾರಿಸಿ ಚೀನಾಗೆ ಸ್ಪಷ್ಟ ಸಂದೇಶ ರವಾನಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net