

ಜಮ್ಮು: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಜಮ್ಮುಕಾಶ್ಮೀರದ ರುಡ್ಖುಡ್ನ ರಾಸಿಯ ಬಳಿ ಲ್ಯಾಂಡ್ ಆಗುವಾಗ ಪತನಗೊಂಡಿದೆ.
ಇಂದು ಬೆಳಗ್ಗೆ 11.30ರಲ್ಲಿ ಘಟನೆ ನಡೆದಿದ್ದು ಹೆಲಿಕಾಪ್ಟರ್ನಲ್ಲಿದ್ದ ಇಬ್ಬರು ಪೈಲಟ್ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಹೆಲಿಕಾಪ್ಟರ್ ಉದ್ಧಾಂಪುರದ ತರಬೇತಿ ಕೇಂದ್ರದಿಂದ ಹೊರಟಿತ್ತು.
ಚೀತಾ ಹೆಲಿಕಾಪ್ಟರ್ ಹೆಚ್ಚಿನ ಕಾರ್ಯಕ್ಷಮತೆಯುಳ್ಳ ಹೆಲಿಕಾಪ್ಟರ್ ಆಗಿದೆ. 1973ರಿಂದಲೂ ಭಾರತೀಯ ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸುತ್ತಿದೆ. 2019ರಲ್ಲಿ ಕೂಡ ಚೀತಾ ಹೆಲಿಕಾಪ್ಟರ್ ಭೂತಾನ್ ಬಳಿ ಅಪಘಾತಕ್ಕೀಡಾಗಿ ಇಬ್ಬರು ಪೈಲಟ್ಗಳು ಮೃತಪಟ್ಟಿದ್ದರು.(ಏಜೆನ್ಸೀಸ್)