

ಲಂಡನ್: ಇತ್ತೀಚಿನ ದಿನಗಳಲ್ಲಿ ಬಜರಂಗ ಬಲಿ ಕಿ ಜೈ ಎಂಬ ಘೋಷಣೆಯೂ ಎಲ್ಲೆಡೆ ವ್ಯಾಪಕವಾಗಿ ಕೇಳಿ ಬರುತ್ತಿದ್ದು ಇದೀಗ ಭಾರತೀಯ ಸೇನೆಯ ಯೋಧರು ಸಹ ಇದನ್ನೇ ಹೇಳಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಯುಕೆ ಜೊತೆಗಿನ ಸಮರಾಭ್ಯಾಸದ ವೇಳೆ ಭಾರತೀಯ ಸೇನೆಯ ಸೈನಿಕರು ಘೋಷಣೆಗಳನ್ಯು ಕೂಗಿದ್ದಾರೆ.
ಯುನೈಟೆಡ್ ಕಿಂಗ್ಡಮ್ನ ಸಾಲಿಸ್ಬರ್ ಪ್ಲೇನ್ಸ್ನಲ್ಲಿ ಅಜಯ್ ವಾರಿಯರ್-23ರ 7ನೇ ಆವೃತ್ತಿಯಲ್ಲಿ ಭಾರತ ಹಾಗೂ ಯುಕೆ ಸೇನೆಯೂ ನಡೆಸುತ್ತಿರುವ ಜಂಟಿ ಸಮರಾಭ್ಯಾಸದಲ್ಲಿ ಘೋಷಣೆಗಳು ಮೊಳಗಿವೆ.
ಭಾರತೀಯ ಸೇನೆಯ ಯೋಧರು ಭಾರತ್ ಮಾತಾ ಕಿ ಹಾಗೂ ಬಜರಂಗ್ ಬಲಿ ಕಿ ಜೈ ಎಂದು ಘೋಷಣೆಗಳನ್ನು ಕೂಗಿರುದವ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.