ಕುಪ್ವಾರದ ಕೇರನ್ ಸೆಕ್ಟರ್‌ನಲ್ಲಿ ಒಳನುಸುಳುತ್ತಿದ್ದ ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ| jammu-kashmir

Indian Army
Published on

ಕುಪ್ವಾರ; ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಇಂದು (ಸೆ.28) ಭದ್ರತಾ ಪಡೆಗಳು ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿ, ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.

ಇನ್ನೂ ಈ ಬಗ್ಗೆ ಸೇನೆಯು ಎಕ್ಸ್​ನಲ್ಲಿ ಟ್ವೀಟ್​ ಮಾಡಿದ್ದು, ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ ನಡೆದಿದೆ. ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಹೇಳಿದೆ. ದಟ್ಟವಾದ ಅರಣ್ಯ ಪ್ರದೇಶದೊಳಗೆ ಶಂಕಿತರನ್ನು ಬಂಧಿಸಲು ಸೈನಿಕರು ಪ್ರಯತ್ನಿಸಿದಾಗ ತೀವ್ರವಾದ ಗುಂಡಿನ ಚಕಮಕಿ ನಡೆಯಿತು ಎಂದು ಎಕ್ಸ್​ನಲ್ಲಿ ಬರೆಯಲಾಗಿದೆ.

ಕಿಶ್ತ್ವಾರ್‌ನ ಕೇಶ್ವಾನ್ ಅರಣ್ಯದಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸೇನೆಯು ಗುಪ್ತಚರ ಆಧಾರಿತ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಬಳಿಕ ಈ ಎನ್‌ಕೌಂಟರ್ ನಡೆದಿದೆ. ಪಾಕಿಸ್ತಾನ ಆಕ್ರಮಿತ ಕಡೆಯಿಂದ ದಾಟಲು ಪ್ರಯತ್ನಿಸುತ್ತಿದ್ದ ಉಗ್ರರನ್ನು ಸೇನೆ ತಡೆದಿದ್ದು, ಈ ಸಂದರ್ಭದಲ್ಲಿ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪದೇ ಪದೇ ಒಳನುಸುಳುವಿಕೆ ಪ್ರಯತ್ನಗಳು ನಡೆಯುತ್ತಿರುವ ಸೂಕ್ಷ್ಮ ವಲಯವಾದ ಕೇರನ್ ವಲಯದಲ್ಲಿ ಬಿಗಿ ಕಣ್ಗಾವಲು ಇರಿಸಲಾಗಿದೆ. ಆದಾಗ್ಯೂ, ನಡೆಯುತ್ತಿರುವ ಗುಂಡಿನ ಚಕಮಕಿ ಮತ್ತು ಎಲ್‌ಒಸಿ ಉದ್ದಕ್ಕೂ ಭೂಪ್ರದೇಶದ ಸವಾಲುಗಳಿಂದಾಗಿ ಅವರ ಮೃತದೇಹಗಳನ್ನು ಇನ್ನೂ ಹೊರತೆಗೆಯಲಾಗಿಲ್ಲ.

(ಏಜೆನ್ಸೀಸ್)

ಸೂಕ್ಷ್ಮ ಒಳನುಸುಳುವಿಕೆ ವಲಯ ಎಂದು ಕರೆಯಲ್ಪಡುವ ಈ ಕೇರನ್ ಪ್ರದೇಶವು, ಈ ಹಿಂದೆ ಇಂತಹ ಹಲವಾರು ಪ್ರಯತ್ನಗಳಿಗೆ ಸಾಕ್ಷಿಯಾಗಿದೆ. ಚಳಿಗಾಲ ಆರಂಭವಾಗುವ ಮೊದಲು ಒಳನುಸುಳುವಿಕೆ ಪ್ರಯತ್ನಗಳು ಸಾಮಾನ್ಯವಾಗಿ ಹೆಚ್ಚಾಗುವ ಸಮಯದಲ್ಲಿ ಗಡಿಯಾಚೆಗಿನ ಭಯೋತ್ಪಾದನೆಯನ್ನು ತಡೆಗಟ್ಟಲು ಭದ್ರತಾ ಪಡೆಗಳು ಹೆಚ್ಚಿನ ಜಾಗರೂಕತೆಯಿಂದ ಕಾರ್ಯ ನಿರ್ವಹಿಸುತ್ತಿವೆ. ಕುಪ್ವಾರದ ನಿಯಂತ್ರಣ ರೇಖೆಯ ಪ್ರದೇಶಕ್ಕೆ ಹೆಚ್ಚುವರಿ ಪಡೆಗಳನ್ನು ನೇಮಿಸಲಾಗಿದ್ದು, ಭಯೋತ್ಪಾದಕರು ತಪ್ಪಿಸಿಕೊಳ್ಳದಂತೆ ಶೋಧ ಕಾರ್ಯಾಚರಣೆ ಮುಂದುವರೆದಿದೆ. ಭದ್ರತಾ ಪಡೆಗಳು ತಮ್ಮ ಸಮೀಪದ ಅರಣ್ಯ ಪ್ರದೇಶಗಳನ್ನು ಸೀಲ್ ಮಾಡಿ ಉಗ್ರರನ್ನು ಹಿಡಿಯುವ ಪ್ರಯತ್ನದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net