ಚೀನಾಕ್ಕೆ ಬುದ್ಧಿ ಕಲಿಸಲು ಸನ್ನದ್ಧವಾಗಿದೆ ಭಾರತೀಯ ಸೇನೆ

chaina force
Published on

ನವದೆಹಲಿ: ಗಡಿ ಪ್ರದೇಶಗಳ ಅಭಿವೃದ್ಧಿ ಮತ್ತು ನಕ್ಷೆಯ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಕೆಲವು ದಿನಗಳಿಂದ ಭಾರತ ಮತ್ತು ಚೀನಾ ಮಧ್ಯೆ ನಡೆದಿರುವ ಶೀತಲ ಸಮರ ಈಗ ಮತ್ತಷ್ಟು ಉಲ್ಬಣಗೊಂಡಂತಿದೆ.

ಭಾರತದಲ್ಲಿರುವ ತನ್ನ ನಾಗರಿಕರನ್ನು ಚೀನಾಕ್ಕೆ ಕರೆದುಕೊಂಡು ಹೋಗಲು ಆ ರಾಷ್ಟ್ರದ ರಾಯಭಾರ ಕಚೇರಿ ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿರುವುದನ್ನು ಪ್ರಕಟಿಸಿರುವ ಬೆನ್ನಿಗೇ, ಎರಡೂ ದೇಶಗಳು ಗಡಿಯಲ್ಲಿ ಸೇನಾ ತುಕಡಿಗಳನ್ನು ನಿಯೋಜಿಸಿರುವ ಸುದ್ದಿ ಬಂದಿದೆ.

ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಬಳಿ ಎರಡೂ ದೇಶಗಳ ಸೈನಿಕರ ನಡುವೆ ಆಗಾಗ ಘರ್ಷಣೆ ನಡೆಯುತ್ತಿರುವುದು ವರದಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚೀನಾ ಐದು ಸಾವಿರ ಯೋಧರನ್ನು ಅಕ್ಸಾಯ್ ಚಿನ್ ಬಳಿ ನಿಯೋಜಿಸಿದೆ. ಗಡಿಯಿಂದ ಕೆಲವೇ ಕಿಲೋಮೀಟರ್‌ಗಳ ಅಂತರದಲ್ಲಿ ಯೋಧರ ಕವಾಯತು ಮತ್ತಿತರ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಿದೆ.

ಇದಕ್ಕೆ ಪ್ರತ್ಯುತ್ತರವೆಂಬಂತೆ ಭಾರತವೂ ಲಡಾಖ್ ಮತ್ತು ಉತ್ತರಾಖಂಡ ವಲಯದಲ್ಲಿ ತನ್ನ ಸೇನಾ ಬಲವನ್ನು ಹೆಚ್ಚಿಸಿ, ಚೀನಾದ ಸಂಭಾವ್ಯ ದಾಳಿ ಅಥವಾ ಗಡಿ ಉಲ್ಲಂಘನೆಯನ್ನು ತಕ್ಷಣ ಹಿಮ್ಮೆಟ್ಟಿಸಲು ಸಿದ್ಧತೆ ಮಾಡಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net