ಲಾಕ್​ಡೌನ್​ ಮುಗಿಯಿತೆಂದು ಶಿಮ್ಲಾ ಪ್ರವಾಸಕ್ಕೆ ಹೊರಡುವುದಾದರೆ ಸ್ವಲ್ಪ ನಿಲ್ಲಿ!

shimla
Published on

ಶಿಮ್ಲಾ: ಕೋವಿಡ್​-19 ಲಾಕ್​ಡೌನ್​ನಿಂದ ಹೊರಗೆಲ್ಲೂ ಹೋಗಲಾಗದೆ ಪರಿತಪಿಸುತ್ತಿರುವ ಜನರು ಲಾಕ್​ಡೌನ್​ ಮುಗಿದರೆ ಸಾಕಪ್ಪಾ... ಎಲ್ಲಾದರೂ ಪ್ರವಾಸಕ್ಕೆ ಹೋಗೋಣ ಎಂದು ಅಂದುಕೊಳ್ಳುತ್ತಿರುತ್ತಾರೆ.

ಜತೆಗೆ, ಮೇ 31ಕ್ಕೆ ಲಾಕ್​ಡೌನ್​ ಮುಗಿಯುತ್ತದೆ. ದೇಶಿಯ ವಿಮಾನ ಸಂಚಾರವೂ ಆರಂಭವಾಗಿದೆ. ಶಿಮ್ಲಾಕ್ಕೆ ಕೂಲಾಗಿ ಪ್ರವಾಸಕ್ಕೆ ಹೋಗಿ ಒಂದೆರಡು ದಿನ ಮಜಾ ಮಾಡಿಕೊಂಡು ಬಂದುಬಿಡೋಣ ಎಂದು ಅಂದುಕೊಳ್ಳುತ್ತಿದ್ದೀರಾ? ಹಾಗಾದರೆ ಸ್ವಲ್ಪ ನಿಲ್ಲಿ!

ಏಕೆಂದರೆ, ಹಿಮಾಚಲಪ್ರದೇಶ ಸರ್ಕಾರ ತನ್ನ ರಾಜ್ಯದಲ್ಲಿ ಜಾರಿಯಲ್ಲಿರುವ ಲಾಕ್​ಡೌನ್​ ಅನ್ನು ಜೂನ್​ 30ರವರೆಗೆ ವಿಸ್ತರಿಸಲು ನಿರ್ಧರಿಸಿದೆ. ಈ ಸಂಬಂಧ ಸೋಮವಾರ ಪ್ರಕಟಣೆಯನ್ನೂ ನೀಡಿದೆ. ಈ ಆದೇಶ ಎಲ್ಲ 12 ಜಿಲ್ಲೆಗಳಿಗೂ ಅನ್ವಯವಾಗುತ್ತದೆ ಎಂದು ಅದು ಹೇಳಿದೆ.

ಹಿಮಾಚಲ ಪ್ರದೇಶದಲ್ಲಿ ಇದುವರೆಗೆ 214 ಕರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಇವರಲ್ಲಿ 63 ಜನರು ಗುಣಮುಖರಾಗಿದ್ದರೆ, ಐವರು ಮೃತಪಟ್ಟಿದ್ದಾರೆ. ಹಮೀರ್​ಪುರದಲ್ಲಿ 63 ಕರೊನಾ ಪಾಸಿಟಿವ್​ ವರದಿಯಾಗಿದ್ದರೆ, ಸೊಲಾನ್​ನಲ್ಲಿ 21 ಕರೊನಾ ಪಾಸಿಟಿವ್​ ಪತ್ತೆಯಾಗಿದೆ.

ರಾಷ್ಟ್ರದ ಇತರೆ ರಾಜ್ಯಗಳಲ್ಲಿ ಲಾಕ್​ಡೌನ್​ ಅನ್ನು ಸಡಿಲಗೊಳಿಸಲು ಅಲ್ಲಿನ ಸರ್ಕಾರಗಳು ಕ್ರಮಕೈಗೊಳ್ಳುತ್ತಿದ್ದರೆ, ಜೈರಾಮ್​ ಠಾಕೂರ್​ ನೇತೃತ್ವದ ಹಿಮಾಚಲ ಪ್ರದೇಶ ಸರ್ಕಾರ ಮಾತ್ರ ಜೂನ್​ 30ರವರೆಗೆ ಲಾಕ್​ಡೌನ್​ ವಿಸ್ತರಿಸುವ ನಿರ್ಧಾರ ಕೈಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net