ಜನಸಂಖ್ಯೆಯ ಶೇ. 10ರಷ್ಟಿರುವ ಮೇಲ್ಜಾತಿಯವರಿಂದ ಭಾರತೀಯ ಸೇನೆಯ ನಿಯಂತ್ರಣ; ವಿವಾದದ ಕಿಡಿ ಹೊತ್ತಿಸಿದ ರಾಹುಲ್ ಗಾಂಧಿ| Rahul Gandhi

ವಿಜಯವಾಣಿ - 2025-11-05T082556.748
Published on

StartFragment ಪಾಟ್ನಾ: ಬಿಹಾರ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನೂ ಒಂದು ದಿನ ಬಾಕಿಯಿರುವಾಗಲೇ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ(Rahul Gandhi), ಭಾರತೀಯ ಸೇನೆಯೂ ದೇಶದ ಜನಸಂಖ್ಯೆಯ ಶೇ. 10ರಷ್ಟಿರುವ ಮೇಲ್ಜಾತಿಗಳ ಜನರಿಂದ ನಿಯಂತ್ರಿಸಲ್ಪಡುತ್ತಿದೆ ಎಂದು ಹೇಳಿ ರಾಜಕೀಯ ವಿವಾದವನ್ನು ಹುಟ್ಟು ಹಾಕಿದ್ದಾರೆ.

ಬಿಹಾರದ ಔರಂಗಾಬಾದ್​​ನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿರುವ ಅವರು, ದೇಶದ ಜನಸಂಖ್ಯೆಯ ಕೇವಲ ಶೇ. 10ರಷ್ಟಿರುವ ಮೇಲ್ಜಾತಿ ಜನರಿಗೆ ಮಾತ್ರ ಕಾರ್ಪೊರೇಟ್ ವಲಯಗಳು, ಅಧಿಕಾರಶಾಹಿ ಹಾಗೂ ನ್ಯಾಯಾಂಗದಲ್ಲಿ ಅವಕಾಶಗಳು ಸಿಗುತ್ತವೆ. ಸೈನ್ಯ ಕೂಡ ಅವರ ನಿಯಂತ್ರಣದಲ್ಲಿದೆ. ಹಿಂದುಳಿದ ವರ್ಗಗಳು, ದಲಿತರು, ಪರಿಶಿಷ್ಟ ಪಂಗಡಗಳು ಹಾಗೂ ಇತರ ಅಲ್ಪಸಂಖ್ಯಾತರನ್ನು ಒಳಗೊಂಡ ಉಳಿದ 90 ಪ್ರತಿಶತ ಭಾರತೀಯರು ಅಂತಗ ಅಧಿಕಾರಶಾಹಿ ಸ್ಥಾನಗಳಿಂದ ದೂರವಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಯುವಕರು ಸೋಶಿಯಲ್​ ಮೀಡಿಯಾದಲ್ಲಿ ರೀಲ್ಸ್​ ಮಾಡುವುದರಲ್ಲೇ ನಿರತರಾಗಬೇಕೆಂದು ಪ್ರಧಾನಿ ಬಯಸುತ್ತಾರೆ: ವಿಪಕ್ಷ ನಾಯಕ ರಾಹುಲ್​ ಗಾಂಧಿ ಆರೋಪ | Rahul Gandhi

ದೇಶದಲ್ಲಿ ಜಾತಿಜನಗಣತಿ ನಡೆಸಬೇಕೆಂಬ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿರುವ ರಾಹುಲ್ ಗಾಂಧಿ, ಎಲ್ಲಾ ಜಾತಿಗಳ ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಮತ್ತು ಸಂವಿಧಾನವನ್ನು ರಕ್ಷಿಸಲು ಜಾತಿಗಣತಿ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.

ದಲಿತರು, ಒಬಿಸಿಗಳು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರು ಎಷ್ಟು ಇದ್ದಾರೆ ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಶೇ.90ರಷ್ಟಿರುವ ಜನರಿಗೆ ಅಧಿಕಾರಶಾಹಿ ಸ್ಥಾನಗಳಲ್ಲಿ ಭಾಗವಹಿಸುವ ಹಕ್ಕುಗಳಿಲ್ಲದಿದ್ದರೆ, ಸಂವಿಧಾನವನ್ನು ರಕ್ಷಿಸಲಾಗುವುದಿಲ್ಲ. ಭಾರತದ ಅಗ್ರ 500 ಕಂಪನಿಗಳಲ್ಲಿ ದಲಿತರೇ ಇಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net