ಟ್ರಂಪ್-ಪುಟಿನ್ ಅಲಾಸ್ಕಾ ಭೇಟಿಯನ್ನು ಸ್ವಾಗತಿಸಿದ ಭಾರತ| India

Randhir Jaiswal
Published on

India: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಅಲಾಸ್ಕಾ ಶೃಂಗಸಭೆಯನ್ನು ಭಾರತ ಶನಿವಾರ (ಆಗಸ್ಟ್​,16) ಸ್ವಾಗತಿಸಿದೆ.

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ವಿದೇಶಾಂಗ ಸಚಿವಾಲಯವು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಅಲಾಸ್ಕಾ ಶೃಂಗಸಭೆಯನ್ನು ಭಾರತ ಶನಿವಾರ ಸ್ವಾಗತಿಸಿದೆ. ಶಾಂತಿಯನ್ನು ಅನುಸರಿಸುವಲ್ಲಿ ಅಮೆರಿಕ ಮತ್ತು ರಷ್ಯಾ ನಾಯಕತ್ವವು ಅತ್ಯಂತ ಶ್ಲಾಘನೀಯ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಯುಕ್ರೇನ್ ಸಂಘರ್ಷವನ್ನು ಪರಿಹರಿಸಲು ರಾಜತಾಂತ್ರಿಕತೆಯ ಮಹತ್ವವನ್ನು ಭಾರತ ಒತ್ತಿ ಹೇಳಿದ್ದು. ಶೃಂಗಸಭೆಯಲ್ಲಿ ಆಗಿರುವ ಪ್ರಗತಿಯನ್ನು ಭಾರತ ಮೆಚ್ಚುತ್ತದೆ. ಮುಂದಿನ ದಾರಿ ಸುಗಮವಾಗಲು ರಾಜತಾಂತ್ರಿಕತೆಯಿಂದ ಮಾತ್ರ ಸಾಧ್ಯ. ಯುಕ್ರೇನ್‌ನಲ್ಲಿನ ಸಂಘರ್ಷಕ್ಕೆ ಶೀಘ್ರ ಅಂತ್ಯ ಕಾಣಬೇಕೆಂದು ಜಗತ್ತು ಬಯಸುತ್ತದೆ ಎಂದು MEA ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದೆ.

1945 ರ ನಂತರ ಯುರೋಪ್‌ನಲ್ಲಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟ ಅತ್ಯಂತ ಭೀಕರ ಸಂಘರ್ಷವಾದ ಯುಕ್ರೇನ್‌ನಲ್ಲಿನ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಉನ್ನತ ಮಟ್ಟದ ಅಲಾಸ್ಕಾ ಶೃಂಗಸಭೆಯು ಶುಕ್ರವಾರ ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡಿತು.

ಉಕ್ರೇನ್‌ನಲ್ಲಿನ ಯುದ್ಧದ ಮೇಲೆ ಕೇಂದ್ರೀಕರಿಸಿದ ಅಲಾಸ್ಕಾದ ಆಂಕಾರೇಜ್‌ನಲ್ಲಿ ಸುಮಾರು ಮೂರು ಗಂಟೆಗಳ ಕಾಲ ನಡೆದ ಶೃಂಗಸಭೆಯ ನಂತರ, ಅಮೆರಿಕ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಹಳ ಉತ್ಪಾದಕ ಪ್ರಗತಿಯನ್ನು ಸಾಧಿಸಿದ್ದೇವೆ ಎಂದು ಟ್ರಂಪ್ ಶುಕ್ರವಾರ ಹೇಳಿದ್ದಾರೆ. ಆದರೆ ಯಾವುದೇ ಅಂತಿಮ ಒಪ್ಪಂದಕ್ಕೆ ಬರಲಿಲ್ಲ ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net