62,370 ಕೋಟಿ ಮೌಲ್ಯದ 97 ತೇಜಸ್ ಮಾರ್ಕ್ -1 ಎ ಜೆಟ್‌ಗಳ ಒಪ್ಪಂದಕ್ಕೆ ಸಹಿ ಹಾಕಿದ ಭಾರತ| tejas

tejas
Published on

ನವದೆಹಲಿ; ಭಾರತದ ರಕ್ಷಣಾ ಸಚಿವಾಲಯ ಇಂದು (ಸೆ.25) ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಜೊತೆ 97 ತೇಜಸ್ ಮಾರ್ಕ್-1A ವಿಮಾನಗಳಿಗಾಗಿ 62,370 ಕೋಟಿ ರೂ. ಮೌಲ್ಯದ ಅತಿದೊಡ್ಡ ಫೈಟರ್ ಜೆಟ್ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಆದೇಶವು 68 ಸಿಂಗಲ್-ಸೀಟ್ ಫೈಟರ್‌ಗಳು ಮತ್ತು 29 ಟ್ವಿನ್-ಸೀಟರ್‌ ಸಂಬಂಧಿತ ಉಪಕರಣಗಳನ್ನು ಒಳಗೊಂಡಿದೆ. ಈ ವಿಮಾನಗಳ ವಿತರಣೆಯು 2027-28ರಲ್ಲಿ ಪ್ರಾರಂಭವಾಗಲಿದ್ದು, ಆರು ವರ್ಷಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ.

ಗಮನಾರ್ಹವಾಗಿ ಭಾರತೀಯ ವಾಯುಪಡೆ (IAF) ಫೆಬ್ರವರಿ 2021 ರಲ್ಲಿ 46,898 ಕೋಟಿ ರೂ.ಗಳಿಗೆ ಆರ್ಡರ್ 83 "ಸುಧಾರಿತ" ಜೆಟ್‌ಗನ್ನು ಬುಕಿಂಗ್​ ಮಾಡಿದೆ. ಆದರೆ ಆ ಅಸ್ತ್ರಗಳು ಇನ್ನೂ ಕೂಡ ಭಾರತಕ್ಕೆ ಬಂದಿಲ್ಲ. ಹೀಗಾಗಿ ಅವುಗಳ ವಿತರಣೆಗಾಗಿ ಭಾರತ ಕಾದು ಕುಳಿತಿದೆ. 2021 ರ ಒಪ್ಪಂದದ ಭಾಗವಾಗಿ ಎಲ್ಲಾ 83 ಜೆಟ್‌ಗಳನ್ನು ಫೆಬ್ರವರಿ 2024 ಮತ್ತು ಫೆಬ್ರವರಿ 2028 ರ ನಡುವೆ ವಿತರಿಸಲು ನಿರ್ಧರಿಸಲಾಗಿತ್ತು. ಈ ಮಧ್ಯೆ ಭದ್ರತೆಯ ಕುರಿತಾದ ಕ್ಯಾಬಿನೆಟ್ ಸಮಿತಿಯು ಆಗಸ್ಟ್ 19, 2025 ರಂದು 97 ಜೆಟ್‌ಗಳ ಹೆಚ್ಚುವರಿ ಸ್ವಾಧೀನಕ್ಕೆ ಅನುಮೋದನೆ ನೀಡಿದೆ. ಈ ಹಿಂದಿನ ಆದೇಶದ ಮೊದಲ ವಿತರಣೆಗಳ ಬಳಿಕವೇ ಹೊಸ ಒಪ್ಪಂದ ಮುಂದುವರಿಯಬೇಕೆಂದು IAF ಒತ್ತಾಯಿಸಿತ್ತು. 2021 ರ ಆದೇಶದ ಮೊದಲ ಎರಡು ಜೆಟ್‌ಗಳನ್ನು ಅಕ್ಟೋಬರ್ ವೇಳೆಗೆ HAL ತಲುಪಿಸುವ ನಿರೀಕ್ಷೆಯಿದೆ.

ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ದೈತ್ಯ ಸಂಸ್ಥೆಗೆ ನೀಡಲಾದ ಎರಡನೇ ಒಪ್ಪಂದ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆ ಕುರಿತ ಸಂಪುಟ ಸಮಿತಿಯು ಈ ಬೃಹತ್ ಖರೀದಿಗೆ ಹಸಿರು ನಿಶಾನೆ ತೋರಿದ ಒಂದು ತಿಂಗಳ ಬಳಿಕ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ವಿಮಾನ ಶೇಕಡಾ 64 ಕ್ಕಿಂತ ಹೆಚ್ಚಿನ ಸ್ಥಳೀಯ ಸಾಮಗ್ರಿಗಳನ್ನು ಹೊಂದಿದ್ದು, ಜನವರಿ 2021 ರಲ್ಲಿ ಸಹಿ ಹಾಕಲಾದ ಹಿಂದಿನ LCA Mk1A ಒಪ್ಪಂದಕ್ಕಿಂತ ಹೆಚ್ಚುವರಿಯಾಗಿ 67 ಹೆಚ್ಚುವರಿ ವಸ್ತುಗಳನ್ನು ಸೇರಿಸಲಾಗುತ್ತದೆ.

(ಏಜೆನ್ಸೀಸ್)

ಇನ್ನೂ ಇದಕ್ಕೆ ಪ್ರತ್ಯುತ್ತರವಾಗಿ ಪಾಕಿಸ್ತಾನ ಸುಮಾರು 25 ಫೈಟರ್​ ಸ್ಕ್ವಾಡ್ರನ್‌ಗಳೊಂದಿಗೆ ಪ್ರಯಾಣಿಸುತ್ತಿದೆ ಮತ್ತು ಮುಂದಿನ ದಿನಗಳಲ್ಲಿ ಕನಿಷ್ಠ 40 J-35A ಐದನೇ ತಲೆಮಾರಿನ ಚೀನೀ ಸ್ಟೆಲ್ತ್ ಜೆಟ್‌ಗಳನ್ನು ಪಡೆಯಲಿದೆ ಎಂದು ಹೇಳಲಾಗಿದೆ. ಚೀನಾ ಸಹಜವಾಗಿ ಭಾರತಕ್ಕಿಂತ ನಾಲ್ಕು ಪಟ್ಟು ಹೆಚ್ಚು ಫೈಟರ್‌ಗಳು, ಬಾಂಬರ್‌ಗಳನ್ನು ಅಧಿಕ ಪ್ರಮಾಣದಲ್ಲಿ ಒಳಗೊಂಡಿದೆ. ಎಚ್‌ಎಎಲ್ ಉತ್ಪಾದನೆಯನ್ನು ವರ್ಷಕ್ಕೆ 20 ತೇಜಸ್‌ಗಳಿಗೆ ಮತ್ತು ಕಳೆದ ವರ್ಷಕ್ಕೆ 24 ರಿಂದ 30ಕ್ಕೆ ಹೆಚ್ಚಿಸುವುದಾಗಿ ತಿಳಿಸಿದೆ.

ಅಸ್ಟ್ರಾ ದೃಶ್ಯ ಶ್ರೇಣಿಯಾಚೆಗಿನ ಕ್ಷಿಪಣಿಗಳು, ಸುಧಾರಿತ ಅಲ್ಪ-ಶ್ರೇಣಿಯ ಕ್ಷಿಪಣಿಗಳು ಮತ್ತು ಲೇಸರ್-ಗೈಡೆಡ್ ಬಾಂಬ್‌ಗಳ ಫೈರಿಂಗ್ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಪ್ರಮಾಣೀಕರಿಸಿದ ಬಳಿಕವೇ ಈ ಜೆಟ್‌ಗಳನ್ನು ಸ್ವೀಕರಿಸುವುದಾಗಿ IAF ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net