ಹೊಸ ದಾಖಲೆಯನ್ನೇ ಸೃಷ್ಟಿಸಿದೆ 24ಗಂಟೆಯಲ್ಲಿ ಪತ್ತೆಯಾದ ಕರೊನಾ ಸೋಂಕಿತರ ಸಂಖ್ಯೆ

Covid 19 Photo
Published on

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಬರೋಬ್ಬರಿ 38,902 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಇದು ಇಲ್ಲಿಯವರೆಗಿನ ದಾಖಲೆಯ ಸಂಖ್ಯೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದ ಕರೊನಾ ಸೋಂಕಿತರ ಸಂಖ್ಯೆ ಇಂದು 10, 77, 618ಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ 543 ಸೋಂಕಿತರು ಸಾವನ್ನಪ್ಪಿದ್ದು, ಮೃತರ ಸಂಖ್ಯೆ 26,816ಕ್ಕೆ ಏರಿದೆ. ಕೊವಿಡ್​-19 ಸಾವಿನ ದರ ಶೇ.2.5ರಷ್ಟಿದೆ ಎಂದು ಇಲಾಖೆ ವರದಿ ನೀಡಿದೆ.

ಇದುವರೆಗೆ ಒಟ್ಟು 6,77,423 ಜನರು ಕೊವಿಡ್​-19 ನಿಂದ ಚೇತರಿಸಿಕೊಂಡು ಡಿಸ್​ಚಾರ್ಜ್​ ಆಗಿದ್ದಾರೆ. 3,73,379 ಸಕ್ರಿಯ ಪ್ರಕರಣಗಳು ಇವೆ. ಚೇತರಿಕೆ ದರ ಶೇ.62ರಷ್ಟಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಕೊವಿಡ್​-19 ರೋಗಿಯ ಮನೆಗೆ ನುಗ್ಗಿ ಮಟನ್​ ತಯಾರಿಸಿ ಊಟ ಮಾಡಿ…ಹಣ ಕದ್ದ ವಿಚಿತ್ರ ಕಳ್ಳರು…!

ಮಹಾರಾಷ್ಟ್ರದಲ್ಲಿ ಕರೊನಾ ಪ್ರಮಾಣ ಮಿತಿಮೀರುತ್ತಿದ್ದು ಅಲ್ಲಿ ಒಟ್ಟು 3,10, 455 ಸೋಂಕಿತರು ಇದ್ದಾರೆ. 11,854 ಮಂದಿ ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net