ಯೂಕ್ರೇನ್-ರಷ್ಯಾ ವಾರ್ ಎಫೆಕ್ಟ್; ಭಾರತ-ರಷ್ಯಾ ಮಧ್ಯೆ ಏರ್​ ಇಂಡಿಯಾ ವಿಮಾನ ಹಾರಾಟ ರದ್ದು!

air india pic
Published on

ನವದೆಹಲಿ: ಉಕ್ರೇನ್​ ಮೇಲೆ ಯುದ್ಧ ಸಾರಿರುವ ರಷ್ಯಾಕ್ಕೆ ಭಾರತದಿಂದ ಏರ್​ ಇಂಡಿಯಾ ವಿಮಾನ ಸಂಚಾರ ತಾತ್ಕಾಲಿಕವಾಗಿ ರದ್ದಾಗಿದೆ. ವಿಮಾನದ ವಿಮೆ ವಿಚಾರವಾಗಿ ಉಭಯ ರಾಷ್ಟ್ರಗಳ ರಾಜಧಾನಿಗಳ ಮಧ್ಯೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಫೆ.24 ರಿಂದ ಉಕ್ರೇನ್​ ಮೇಲೆ ರಷ್ಯಾ ಯುದ್ಧ ಆರಂಭಿಸಿದ್ದು, ಇದನ್ನು ಖಂಡಿಸಿ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾಕ್ಕೆ ವಿಮಾನ ಹಾರಾಟವನ್ನು ನಿರ್ಬಂಧಿಸಿವೆ. ಇದೀಗ ದೆಹಲಿ ಮತ್ತು ಮಾಸ್ಕೋ ನಡುವಿನ ವಿಮಾನ ಹಾರಾಟ ಕೂಡ ರದ್ದಾಗಿದೆ.

ಇದಕ್ಕೆ ಕಾರಣ ವಿಮಾನಗಳಿಗೆ ವಿಮೆಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳ ಮೂಲದ ಕಂಪನಿಗಳೇ ಒದಗಿಸುತ್ತಿವೆ. ಹೀಗಾಗಿ ಎರಡು ನಗರದ ಮಧ್ಯೆ ವಿಮಾನ ಹಾರಾಟ ಮಾಡಿದ್ರೆ ವಿಮೆ ಅನ್ವಯವಾಗಲ್ಲ ಎಂಬ ಭೀತಿಯಿಂದ ಹಾರಾಟ ನಿಲ್ಲಿಸಲಾಗಿದೆ.

ದೆಹಲಿ ಮತ್ತು ಮಾಸ್ಕೋ ನಡುವೆ ವಾರದಲ್ಲಿ ಏರ್​ ಇಂಡಿಯಾ ವಿಮಾನ ಸಂಚರಿಸುತ್ತಿತ್ತು. ಈಗ ಗುರುವಾರದಿಂದ ಈ ವಿಮಾನ ಹಾರಾಟ ರದ್ದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net