ಕುಡಿದ ಮತ್ತಿನಲ್ಲಿ ಪ್ರೇಯಸಿಯನ್ನೇ ಕೊಂದ ಪ್ರಿಯಕರ!

murder pic
Published on

ಕಾರವಾರ: ಕುಡಿದ ಅಮಲಿನಲ್ಲಿ ತನ್ನ ಪ್ರೇಯಸಿಯನ್ನೇ ಪ್ರಿಯತಮ ಕೊಚ್ಚಿ ಕೊಂದಿರುವ ಘಟನೆ ನಗರದ ಕಳಸವಾಡದಲ್ಲಿ ನಡೆದಿದೆ.

ತಾಲೂಕಿನ ಶಿರವಾಡದ ಶಾಂತಾ ಗೌಡ (45) ಮೃತ ಮಹಿಳೆ. ಪ್ರಿಯಕರ ಹನುಮಂತ ಸಿದ್ದಿ ಕೊಲೆ ಮಾಡಿರುವ ಆರೋಪಿ. ಕಳಸವಾಡದ ಹನುಮಂತ ಸಿದ್ದಿ ಮನೆಯಲ್ಲಿ ವಾಸವಿದ್ದ ಮಹಿಳೆಯ ಮೃತದೇಹ ಇಂದು ಬೆಳಗ್ಗೆ ಪತ್ತೆಯಾಗಿದೆ. ಮಹಿಳೆಯ ಉಡುಗೆ ಅಸ್ತವ್ಯಸ್ತವಾಗಿತ್ತು. ಹನುಮಂತ ಸಿದ್ದಿ ಹಾಗೂ ಶಾಂತಾ ಗೌಡ ಇಬ್ಬರ ನಡುವೆ ರಾತ್ರಿ ವೇಳೆ ಗಲಾಟೆ ನಡೆದು ಕುಡಿದ ಅಮಲಿನಲ್ಲಿ ಹನುಮಂತ ಸಿದ್ದಿ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ವೆಲ್ಲೆಂಟೈನ್ ಡಿಸೋಜಾ, ಪಿಐ ಸಿದ್ದಪ್ಪ ಬಿಳಗಿ, ಪಿಎಸ್​ಐ ಸಂತೋಷ ಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net