India-Pakistan Tension; ನೀವು ಹೀಗೆ ಮಾಡ್ಬೇಡಿ..; S.S​.ರಾಜಮೌಳಿ ಜನರಿಗೆ ಮನವಿ ಮಾಡಿದ್ದೇನು?

dk - 2025-05-09T184757.133
Published on

India-Pakistan Tension: ಭಾರತ ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಮಾತನಾಡಿರುವ ನಿರ್ದೇಶಕ ಎಸ್​.ಎಸ್​.ರಾಜಮೌಳಿ ಜನರಿಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಹೌದು, ಕಳೆದ ಎರಡು ದಿನಗಳಿಂದ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಗಡಿಯಲ್ಲಿ ಭಾರೀ ಉದ್ವಿಗ್ನತೆ ಏರ್ಪಪಟ್ಟಿದ್ದು, ಪಾಕ್​ ನಡೆಸಿದ ಕದನ ವಿರಾಮ ಉಲ್ಲಂಘನೆ ವಿರುದ್ಧ ನಮ್ಮ ಸೇನಾಪಡೆಗಳು ದಿಟ್ಟಾ ಉತ್ತರ ನೀಡಿವೆ. ಇದೀಗ ಈ ಬಗ್ಗೆ ಮಾತನಾಡಿರುವ ರಾಜಮೌಳಿ,'' ನಮ್ಮ ರಾಷ್ಟ್ರವನ್ನು ಭಯೋತ್ಪಾದನೆಯಿಂದ ರಕ್ಷಿಸುವಲ್ಲಿ ನಮ್ಮ ಧೈರ್ಯಶಾಲಿ ಭಾರತೀಯ ಸಶಸ್ತ್ರ ಪಡೆಗಳ ಅಚಲ ಧೈರ್ಯಕ್ಕೆ ಸಲ್ಯೂಟ್​. ಶಾಂತಿ ಮತ್ತು ಏಕತೆಯ ಭವಿಷ್ಯವನ್ನು ನಿರ್ಮಿಸಲು ಅವರ ಶೌರ್ಯದಿಂದ ಪ್ರೇರಿತರಾಗಿ, ಒಂದು ರಾಷ್ಟ್ರವಾಗಿ ಒಟ್ಟಾಗಿ ನಿಲ್ಲೋಣ. ಜೈ ಹಿಂದ್!” ಎಂದಿದ್ದಾರೆ.

ಜನರಿಗೆ ಮನವಿ ಮಾಡಿದ್ದೇನು?

ರಕ್ಷಣಾ ಸಚಿವಾಲಯದ ನಿರ್ದೇಶನವನ್ನು ಒತ್ತಿ ಹೇಳುತ್ತಾ, ನಮ್ಮ ಸೈನಿಕರ ವೀಡಿಯೊಗಳು ಮತ್ತು ಪರಿಶೀಲಿಸದ ಸುದ್ದಿಗಳನ್ನು ಹಂಚಿಕೊಳ್ಳದಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಭಾರತೀಯ ಸೇನೆಯ ಯಾವುದೇ ಚಲನವಲನಗಳನ್ನು ನೀವು ನೋಡಿದರೆ, ಅದರ ಚಿತ್ರಗಳನ್ನು ಅಥವಾ ವೀಡಿಯೊಗಳನ್ನು ತೆಗೆದುಕೊಳ್ಳಬೇಡಿ.ಇದರಿಂದ ಶತ್ರುಗಳಿಗೆ ಸಹಾಯ ಮಾಡಿದಂತಾಗುತ್ತೆ. ಆದ್ದರಿಂದ, ಅವುಗಳನ್ನು ಹಂಚಿಕೊಳ್ಳಬೇಡಿ. ಪರಿಶೀಲಿಸದ ಸುದ್ದಿ ಅಥವಾ ಹಕ್ಕುಗಳನ್ನು ಫಾರ್ವರ್ಡ್ ಮಾಡುವುದನ್ನು ನಿಲ್ಲಿಸಿ ಎಂದು ಮನವಿ ಮಾಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net