

ತಂತ್ರಾನ ಕ್ಷೇತ್ರದಲ್ಲಿ ಭಾರತವನ್ನು ಮುನ್ನೆಲೆಗೆ ತರುವ ಉದ್ದೇಶದಿಂದ ಡಿಜಿಟಲ್ ಇಂಡಿಯಾ ಯೋಜನೆ ರೂಪುಗೊಂಡಿದೆ. ತಂತ್ರಾನದ ಸಹಾಯದಿಂದ ಸರ್ಕಾರದ ಸೇವೆಗಳು ಸುಲಭವಾಗಿ ಜನರಿಗೆ ತಲುಪುವಂತೆ ಮಾಡುವುದು ಮತ್ತು ದೇಶದ ಜನತೆ ನೂತನ ತಂತ್ರಾನಗಳ ಸದ್ಬಳಕೆ ಮಾಡಿಕೊಳ್ಳಬೇಕೆಂಬ ಆಶಯಕ್ಕೆ ಆರು ವರ್ಷ ಪೂರ್ಣ.
ದೇಶದ ಮಾಹಿತಿ-ತಂತ್ರಜ್ಞಾನ ರಂಗದ ಮಹತ್ವದ ಯೋಜನೆ 'ಡಿಜಿಟಲ್ ಇಂಡಿಯಾ'ಕ್ಕೆ 2015ರ ಜುಲೈ 1 ರಂದು ಕೇಂದ್ರ ಸರ್ಕಾರ ಚಾಲನೆ ನೀಡಿತು. ಈ ಕಾರ್ಯಕ್ರಮದಡಿ ಹಲವು ಯೋಜನೆಗಳು ಬೆಸೆದುಕೊಂಡಿವೆ. ಭಾರತವನ್ನು ಜ್ಞಾನ ಸಂಪನ್ಮೂಲ ದೇಶವನ್ನಾಗಿಸುವ ಕನಸು ಹೊಂದಿರುವ ಈ ಯೋಜನೆ, ಸಾರ್ವಜನಿಕ ಸಹಭಾಗಿತ್ವದಲ್ಲಿ ಉತ್ತಮ ಆಡಳಿತ ನೀಡುವ ಉದ್ದೇಶ ಹೊಂದಿದೆ. ಮೂಲಸೌಕರ್ಯ ಸೃಷ್ಟಿ ಪ್ರಕ್ರಿಯೆ ಸೇರಿ ಡಿಜಿಟಲ್ ಇಂಡಿಯಾದ ವಿವಿಧ ಯೋಜನೆಯಡಿ 1.7 ಕೋಟಿ ಜನರಿಗೆ ಪ್ರತ್ಯಕ್ಷವಾಗಿ ಹಾಗೂ 8.5 ಕೋಟಿ ಜನರಿಗೆ ಅಪ್ರತ್ಯಕ್ಷವಾಗಿ ಉದ್ಯೋಗಾವಕಾಶ ಸೃಷ್ಟಿಯಾಗಲಿದೆ ಎಂದು ಸರ್ಕಾರ ಘೋಷಿಸಿತ್ತು.
ಪ್ರಾಜೆಕ್ಟ್ನಲ್ಲಿ ಏನೆಲ್ಲ?
* ದೇಶದ 2.30 ಲಕ್ಷ ಶಾಲೆಗಳಿಗೆ ವೈಫೈ ಸಂಪರ್ಕ ಕಲ್ಪಿಸಲು ನಿರ್ಧಾರ. ಮಾತ್ರವಲ್ಲ, ಶಾಲೆಗಳಲ್ಲಿ ಡಿಜಿಟಲ್ ತರಬೇತಿ.
* ಪ್ರಮುಖ ಸೇವೆಗಳೆಂದರೆ, ಡಿಜಿಟಲ್ ಲಾಕರ್, ನ್ಯಾಷನಲ್ ಸ್ಕಾಲರ್ಷಿಪ್ ಪೋರ್ಟಲ್, ಇ-ಹಾಸ್ಪಿಟಲ್, ಇ-ಸೈನ್, ಡಿಜಿಟಲ್ ಏಜೆಂಟ್, ಮೈ ಗವರ್ನ್ಮೆಂಟ್ ಆ್ಯಪ್, ಸ್ವಚ್ಛ ಭಾರತ್ ಆ್ಯಪ್, ಡಿಜಿಟಲ್ ಇಂಡಿಯಾ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ಸ್, 11 ರಾಜ್ಯಗಳಲ್ಲಿ 'ಭಾರತ್ನೆಟ್' ಸೇವೆ.
* ಇಲೆಕ್ಟ್ರಾನಿಕ್ ಸೇವೆ, ಉತ್ಪನ್ನ, ಉತ್ಪಾದನೆ ಮತ್ತು ಉದ್ಯೋಗ ಅವಕಾಶ ಸೇರಿ ಹಲವು ಕ್ಷೇತ್ರಗಳ ಬೆಳವಣಿಗೆ. ಪ್ರತಿಯೊಬ್ಬ ನಾಗರಿಕನಿಗೂ ಅನುಕೂಲವಾಗುವಂಥ ಡಿಜಿಟಲ್ ಮೂಲಸೌಕರ್ಯ.
* ಬ್ರಾಡ್ಬ್ಯಾಂಡ್ ಹೈವೇ, ಮೊಬೈಲ್ ಸಂಪರ್ಕಕ್ಕಾಗಿ ಸಾರ್ವತ್ರಿಕ ಅವಕಾಶ, ಸಾರ್ವಜನಿಕ ಅಂತರ್ಜಾಲ ಬಳಕೆ ಯೋಜನೆ, ಇ-ಆಡಳಿತ - ತಂತ್ರಜ್ಞಾನದ ಮೂಲಕ ಸರ್ಕಾರದ ಕೆಲಸಗಳ ಸುಧಾರಣೆ, ಇ ಕ್ರಾಂತಿ- ಇಲೆಕ್ಟ್ರಾನಿಕ್ ಮಾಧ್ಯಮದ ಮುಖೇನ ಸೇವೆಗಳನ್ನು ಒದಗಿಸುವುದು, ಎಲ್ಲರಿಗೂ ಮಾಹಿತಿ ಪೂರೈಸುವುದು, ಇಲೆಕ್ಟ್ರಾನಿಕ್ಸ್ ಉತ್ಪಾದನೆ-ಆಮದು ಪ್ರಕ್ರಿಯೆಯನ್ನು ಪೂರ್ತಿಯಾಗಿ ನಿಲ್ಲಿಸುವ ಗುರಿ.
* ಉತ್ತಮ ಮೂಲಸೌಕರ್ಯ ಒದಗಿಸುವ ಮೂಲಕ ದೇಶದಾದ್ಯಂತ ಅತಿವೇಗದ ಅಂತರ್ಜಾಲ ಸೇವೆ.
* ರಾಷ್ಟ್ರೀಯ ಗ್ರಾಮೀಣ ಇಂಟರ್ನೆಟ್ ಮಿಷನ್ ಅಡಿ ಸಾರ್ವಜನಿಕ ಇಂಟರ್ನೆಟ್ ಲಭ್ಯತೆ ಕಾರ್ಯಕ್ರಮ. ಗ್ರಾಮ ಪಂಚಾಯಿತಿಗಳಿಗೆ ಇಂಟರ್ನೆಟ್ ಸಂಪರ್ಕ, ಅಂಚೆಕಚೇರಿಗಳನ್ನು ಬಹುಸೇವಾ ಕೇಂದ್ರಗಳನ್ನಾಗಿ ಪರಿವರ್ತಿಸುವುದು.
* ರಾಷ್ಟ್ರೀಯ ಜ್ಞಾನ ಜಾಲ ಮತ್ತು ರಾಷ್ಟ್ರೀಯ ಆಪ್ಟಿಕ್ ಫೈಬರ್ ಜಾಲದ ಮೂಲಕ ದೇಶವ್ಯಾಪಿ ಮಾಹಿತಿ ಮೂಲಸೌಕರ್ಯ ಒದಗಿಸುವುದು.
* ಅತ್ಯಂತ ಹಿಂದುಳಿದ 55,619 ಗ್ರಾಮಗಳಲ್ಲೂ ಮೊಬೈಲ್ ಸಂಪರ್ಕ ಸಾರ್ವತ್ರಿಕಗೊಳಿಸುವುದು.
ಆರಂಭಿಕ ಸೇವೆಗಳು
* ಭಾರತ್ ನೆಟ್
* ಡಿಜಿಟಲ್ ಲಾಕರ್
* ನ್ಯಾಷನಲ್ ಸ್ಕಾಲರ್ಶಿಪ್ ಪೋರ್ಟಲ್
ಬಂಡವಾಳ ಹೂಡಿಕೆ
* ರಿಲಯನ್ಸ್ನಿಂದ 2.5 ಲಕ್ಷ ಕೋಟಿ ರೂ.
* 4 ಜಿ ಮತ್ತು ಇ-ಹೆಲ್ತ್ ಸೌಲಭ್ಯ ವಿಸ್ತರಿಸಲು ಭಾರ್ತಿ ಏರ್ಟೆಲ್ ನೆರವು; ಮುಂದಿನ 5 ವರ್ಷಗಳಲ್ಲಿ ಕಂಪನಿಯಿಂದ 1 ಲಕ್ಷ ಕೋಟಿ ರೂ. ಹೂಡಿಕೆ
* ಆದಿತ್ಯ ಬಿರ್ಲಾ ಗ್ರೂಪ್ನಿಂದ 44,516 ಕೋಟಿ ರೂ. ಹೂಡಿಕೆ
* ಇ- ಗವರ್ನೆನ್ಸ್ನಲ್ಲಿ ಕೈಜೋಡಿಸಲಿದೆ ಟಾಟಾ ಸಮೂಹ
ಯೋಜನೆ ಉದ್ದೇಶಗಳು
* 2.4 ಲಕ್ಷ ಹಳ್ಳಿಗಳಲ್ಲಿ ಬ್ರಾಡ್ಬ್ಯಾಂಡ್ ಸೌಲಭ್ಯ
* ಸಾರ್ವತ್ರಿಕ ಫೋನ್ ಸಂಪರ್ಕ
* 4 ಲಕ್ಷ ಸಾರ್ವಜನಿಕ ಇಂರ್ಟನೆಟ್ ಆ್ಯಕ್ಸೆಸ್ ಪಾಯಿಂಟ್ಗಳು
* 2.5 ಲಕ್ಷ ಶಾಲೆ, ಎಲ್ಲ ವಿವಿಗಳಲ್ಲಿ ವೈ-ಫೈ ಸೌಲಭ್ಯ
* ಸಾರ್ವಜನಿಕರಿಗಾಗಿ ವೈ-ಫೈ ಹಾಟ್ಸ್ಪಾಟ್ ಅಭಿವೃದ್ಧಿ
ಕನಿಷ್ಠ ಸರ್ಕಾರ ಗರಿಷ್ಠ ಆಡಳಿತಕ್ಕೆ ಬಲ
ಕನಿಷ್ಠ ಸರ್ಕಾರ ಮತ್ತು ಗರಿಷ್ಠ ಆಡಳಿತದ ಕನಸನ್ನು ನನಸು ಮಾಡುವುದಕ್ಕೆ ಇರುವ ಏಕೈಕ ದಾರಿ ಡಿಜಿಟಲ್ ಇಂಡಿಯಾ. ಸರ್ಕಾರದ ಮಟ್ಟಿಗೆ ನವೋನ್ವೇಷಣೆಯೇ ಪ್ರಮುಖ ಆದ್ಯತೆ ಮತ್ತು ಈ ದಶಕ ಭಾರತದ ಮಟ್ಟಿಗೆ ಟೆಕ್ ದಶಕವಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಡಿಜಿಟಲ್ ಇಂಡಿಯಾಕ್ಕೆ ಆರು ವರ್ಷ ಪೂರ್ಣಗೊಂಡ ನಿಮಿತ್ತ ಗುರುವಾರ ಆಯೋಜಿಸಿದ್ದ ವರ್ಚುವಲ್ ಸಭೆಯಲ್ಲಿ ಯೋಜನೆಯ ಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಿದರು. ಡೇಟಾ, ಜನಸಂಖ್ಯಾ ಪ್ರಯೋಜನಗಳ ಜತೆಗೆ ಟೆಕ್ ಸಾಮರ್ಥ್ಯಗಳು ದೇಶಕ್ಕೆ ದೊಡ್ಡ ಅವಕಾಶವನ್ನೇ ಒದಗಿಸುತ್ತಿವೆ. ಇವೆಲ್ಲ ಸೇರಿ ಈ ದಶಕವನ್ನು ಭಾರತದ ಟೆಕ್ ದಶಕವನ್ನಾಗಿ ಪರಿವರ್ತಿಸಲಿವೆ. ಡಿಜಿಟಲ್ ಟೆಕ್ನಾಲಜಿ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ಹೆಚ್ಚಾಗಲಿದೆ ಮತ್ತು ಜಾಗತಿಕ ಡಿಜಿಟಲ್ ಎಕಾನಮಿಯಲ್ಲಿ ಭಾರತದ ಪಾಲು ಕೂಡ ಹೆಚ್ಚಾಗಲಿದೆ ಎಂದು ಮೋದಿ ಹೇಳಿದರು.
ರೈತರಿಗೆ ವರದಾನವಾದ ಡಿಬಿಟಿ
ತಂತ್ರಜ್ಞಾನದ ಸಮರ್ಥ ಬಳಕೆ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ಹಾಗೂ ಇತರ ಅಪಸವ್ಯಗಳನ್ನು ತಡೆಯಬಲ್ಲದು ಎಂಬುದಕ್ಕೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸಾ. ಈ ಯೋಜನೆಯಡಿ ಸಹಾಯಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ (ನೇರ ನಗದು ವರ್ಗಾವಣೆ) ಜಮಾ ಮಾಡಲಾಗುತ್ತಿದೆ. ಈವರೆಗೆ 10 ಕೋಟಿ ರೈತರು 1.35 ಲಕ್ಷ ಕೋಟಿ ನೆರವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಂದಲೇ ಪಡೆದುಕೊಂಡಿದ್ದಾರೆ ಎಂದು ಮೋದಿ ವಿವರಿಸಿದರು. ಹಾಗೆಯೇ 'ಒನ್ ನೇಶನ್ ಒನ್ ಎಂಎಸ್ಪಿ' ಯೋಜನೆ ಅಡಿ ಗೋಧಿ ಬೆಳೆಗಾರರಿಗೆ 85 ಸಾವಿರ ಕೋಟಿ ಬೆಂಬಲ ಬೆಲೆ ಅವರ ಬ್ಯಾಂಕ್ ಖಾತೆಗಳಿಗೆ ಸಂದಾಯವಾಗಿದೆ.
ಡೇಟಾ ರಕ್ಷಣೆಗೆ ಭಾರತ ಬದ್ಧ
ಭಾರತವು ಡೇಟಾ ಪವರ್ಹೌಸ್ ಆಗಿದ್ದು, ಅದರ ಹೊಣೆಗಾರಿಕೆಗಳ ಬಗ್ಗೆ ಜಾಗೃತ ಪ್ರಜ್ಞೆ ಇದೆ. ಎಲ್ಲ ಆಯಾಮಗಳಲ್ಲೂ ಡೇಟಾ ರಕ್ಷಣೆಯ ಕೆಲಸ ಪ್ರಗತಿಯಲ್ಲಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಶಿಕ್ಷಣ ಮುಂದುವರಿಸುವುದಕ್ಕೆ. ಇತರ ಸಾರ್ವಜನಿಕ ಸೇವೆಗಳು ಮತ್ತು ಆರೋಗ್ಯ ಸೇವೆ ಒದಗಿಸುವುದಕ್ಕೆ ನೆರವಾಗಿರುವುದು ತಂತ್ರಜ್ಞಾನವೇ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಡಿಜಿಟಲ್ ಸಲ್ಯೂಷನ್ಗೆ ವಿಶ್ವ ಮನ್ನಣೆ
ಕೋವಿಡ್ 19 ಸಂಕಷ್ಟದ ಅವಧಿಯಲ್ಲಿ ಅಭಿವೃದ್ಧಿ ಪಡಿಸಿದ ಡಿಜಿಟಲ್ ಸಲ್ಯೂಷನ್ಸ್ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿವೆ. ಆರೋಗ್ಯ ಸೇವೆ ಒದಗಿಸುವಲ್ಲಿ ಕಾಂಟ್ಯಾಕ್ಟ್ ಟ್ರೇಸಿಂಗ್ ಆ್ಯಪ್, ಆರೋಗ್ಯ ಸೇತು ಪ್ರಮುಖ ಪಾತ್ರವಹಿಸಿವೆ. ನವಭಾರತದ ಯಶೋಗಾಥೆಗಳಲ್ಲಿ ಡಿಜಿಟಲ್ ಇಂಡಿಯಾ ಪ್ರಮುಖವಾದುದು ಎಂದು ಮೋದಿ ಹೇಳಿದರು.