ಯುವಪೀಳಿಗೆ ಶಕ್ತಿಬಲದಿಂದ ಭಾರತ ವಿಶ್ವಗುರು

abvp conference
ನಗರದ ಅಲ್ಲಮಪ್ರಭು ಮೈದಾನದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ 44ನೇ ಪ್ರಾಂತ ಸಮ್ಮೇಳನದಲ್ಲಿ ಎಬಿವಿಪಿ ಪುಸ್ತಕ ಬಿಡುಗಡೆಗೊಳಿಸಲಾಯಿತು. ಎಸ್.ಬಾಲಕೃಷ್ಣ, ಚ.ನ.ಶಂಕರರಾವ್, ಪ್ರೊ. ಪಿ.ವಿ.ಕೃಷ್ಣಭಟ್, ಪ್ರೊ. ರಾಜಶರಣಶಾಹಿ, ಡಾ. ರವಿ ಮಂಡ್ಯ, ಎಚ್.ಕೆ.ಪ್ರವೀಣ್ ಇದ್ದರು.
Published on

ಶಿವಮೊಗ್ಗ: ವಿದ್ಯಾರ್ಥಿ ಶಕ್ತಿ ದೇಶದ ಶಕ್ತಿಯಾಗಿದೆ. ಭಾರತ ವಿಶ್ವಗುರು ಆಗಲು ಯುವ ಪೀಳಿಗೆ ಅತ್ಯಗತ್ಯವಾಗಿದ್ದು ಶ್ರೇಷ್ಠ ಮತ್ತು ಸಮರ್ಥ

ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಿದೆ ಎಂದು ಎಬಿವಿಪಿ ಸಹ ಸಂಘಟನಾ ಕಾರ್ಯದರ್ಶಿ ಎಸ್.ಬಾಲಕೃಷ್ಣ ಹೇಳಿದರು.

ನಗರದ ಅಲ್ಲಮಪ್ರಭು ಮೈದಾನದಲ್ಲಿ ಶನಿವಾರ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ 44ನೇ ಪ್ರಾಂತ ಸಮ್ಮೇಳನದ

ಎರಡನೇ ದಿನದ ಎರಡನೇ ಗೋಷ್ಠಿಯಲ್ಲಿ ಕ್ಯಾಂಪಸ್ ಕಾರ್ಯ ಕುರಿತು ಮಾತನಾಡಿ, ಕರುಣೆ, ಸಂಪರ್ಕ, ಸಂವಹನ, ವಿಶ್ವಾಸರ್ಹತೆ ಮತ್ತು

ನಡತೆ ವಿದ್ಯಾರ್ಥಿ ಸಮೂಹದ ಶಕ್ತಿ ಆಗಬೇಕಿದೆ ಎಂದು ತಿಳಿಸಿದರು.

ನಮ್ಮ ಭಾರತೀಯ ಸಂಸ್ಕೃತಿ ಬಗ್ಗೆ ಪ್ರತಿಯೊಬ್ಬರಲ್ಲೂ ಹೆಮ್ಮೆ ಇರಬೇಕು. ಭಾರತದಲ್ಲಿ 18ರಿಂದ 25 ವರ್ಷದ ನಡುವೆ ಶೇ. 65ರಷ್ಟು

ಯುವಜನರಿದ್ದಾರೆ. ಎಲ್ಲ ರಂಗದಲ್ಲಿ ಭಾರತೀಯ ಯುವಜನರಿದ್ದು, ನಾಸಾದಲ್ಲಿ ಶೇ.35ರಷ್ಟು ಯುವಜನರಿದ್ದು ಮಾತ್ರವಲ್ಲದೆ, ಬ್ಯಾಂಕಿಂಗ್,

ವೈದ್ಯಕೀಯ ರಂಗದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದರು.

70 ವರ್ಷಗಳಿಂದ ಯುವ ಶಕ್ತಿಯನ್ನು ಬಳಸಿಕೊಂಡು ದೇಶ ಕಟ್ಟುವಲ್ಲಿ ಕಾರ್ಯದಲ್ಲಿ ಪರಿಷತ್ ತೊಡಗಿದೆ. ದೇಶ ಮೊದಲು ಎಂಬ

ಧ್ಯೇಯದೊಂದಿಗೆ ಸಂಘಟನೆ ಗಟ್ಟಿಯಾಗಿ ಬೆಳೆದಿದೆ. ವಿದ್ಯಾರ್ಥಿಗಳ ಕ್ಷೇತ್ರ ಇಡೀ ವಿಶ್ವವನ್ನೇ ಕಂಪನಗೊಳಿಸುವ ಶಕ್ತಿ ಪಡೆದುಕೊಂಡಿದೆ

ಎಂದು ಬಣ್ಣಿಸಿದರು.

ಎಬಿವಿಪಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಪರಿಷತ್ ನಿಕಟಪೂರ್ವ ಪ್ರಾಂತ ಅಧ್ಯಕ್ಷ ಚ.ನ.ಶಂಕರರಾವ್ ಮಾತನಾಡಿ, ವೈಚಾರಿಕತೆ

ಎಂಬುದು ಆದರ್ಶ ಗುರಿಯಾಗಿ ಮುಂದೆ ನಿಲ್ಲಬೇಕಿದೆ. ಯಾವುದೇ ಕ್ಷೇತ್ರದಲ್ಲಿ ಇದ್ದರೂ ನಮ್ಮ ಗುರುತನ್ನು ಅಲ್ಲಿಯೇ ಬಿಟ್ಟು ಹೋಗಲು

ಸಾಧ್ಯವಾಗಲಿದೆ. ಆ ನಿಟ್ಟಿನಲ್ಲಿ ಎಬಿವಿಪಿ ಕಾರ್ಯ ಮಹತ್ವದ್ದಾಗಿದ್ದು, ಪ್ರತಿಯೊಬ್ಬರೂ ವೈಚಾರಿಕತೆ ಬೆಳೆಸಿಕೊಳ್ಳಬೇಕು ಎಂದರು. ಎಬಿವಿಪಿ

ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಎಚ್.ಕೆ.ಪ್ರವೀಣ್, ಡಾ. ರವಿ ಮಂಡ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net