ವಿಶ್ವನಾಯಕರ ಎದುರು ಭಾರತ ಶ್ರೇಷ್ಠ ದೇಶ, ಮೋದಿ ಬೆಸ್ಟ್ ಫ್ರೆಂಡ್ ಎಂದ ಡೊನಾಲ್ಡ್​​ ಟ್ರಂಪ್ | Great Country

Untitled design - 2025-10-14T070614.528
Published on

ಈಜಿಪ್ಟ್: ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ಹೆಸರಿಸದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೊಗಳಿದ್ದಾರೆ.

ಇಸ್ರೇಲ್-ಹಮಾಸ್ ಯುದ್ಧವನ್ನು ಕೊನೆಗೊಳಿಸಿ ಗಾಜಾದಲ್ಲಿ ಕದನ ವಿರಾಮ ಒಪ್ಪಂದದ ನಂತರ ಈಜಿಪ್ಟ್ ನಗರದಲ್ಲಿ ಆಯೋಜಿಸಿದ್ದ ವಿಶ್ವ ನಾಯಕರ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಟ್ರಂಪ್, "ಭಾರತವು ನನ್ನ ಉತ್ತಮ ಸ್ನೇಹಿತನನ್ನು ಹೊಂದಿರುವ ಉತ್ತಮ ದೇಶ(Great Country). ಭಾರತ ಮತ್ತು ಪಾಕಿಸ್ತಾನಗಳು ಒಟ್ಟಿಗೆ ಚೆನ್ನಾಗಿ ಬದುಕುತ್ತವೆ'' ಎಂದು ನಾನು ಭಾವಿಸುತ್ತಾರೆ ಎಂದು ಹೇಳಿದರು.

''ಭಾರತ ಒಂದು ಅದ್ಭುತ ದೇಶ, ನನ್ನ ಒಬ್ಬ ಆತ್ಮೀಯ ಸ್ನೇಹಿತ ಉನ್ನತ ಸ್ಥಾನದಲ್ಲಿದ್ದಾರೆ ಮತ್ತು ಅವರು ಅದ್ಭುತ ಕೆಲಸ ಮಾಡಿದ್ದಾರೆ. ಪಾಕಿಸ್ತಾನ ಮತ್ತು ಭಾರತ ಒಟ್ಟಿಗೆ ತುಂಬಾ ಚೆನ್ನಾಗಿ ಬದುಕಲಿವೆ ಎಂದು ನಾನು ಭಾವಿಸುತ್ತೇನೆ" ಎಂದು ಟ್ರಂಪ್ ತಮ್ಮ ಹಿಂದೆ ನಿಂತಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರನ್ನು ನೋಡುತ್ತಾ ಹೇಳಿದರು.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಸೇರಿದಂತೆ 7 ಯುದ್ಧಗಳನ್ನು ನಿಲ್ಲಿಸಿದ್ದು, ನಾನೇ ಎಂದು ಹೇಳಿಕೊಳ್ಳುತ್ತಿದ್ದ ಟ್ರಂಪ್, ಇದೀಗ ಇಸ್ರೇಲ್-ಗಾಜಾ ಸಂಘರ್ಷವನ್ನು ಕೂಡ ನಾನೇ ನಿಲ್ಲಿಸಿದ್ದು ಎಂದು ಹೇಳುವ ಮೂಲಕ ಈಗ ಆ ಸಂಖ್ಯೆಯನ್ನು ಎಂಟಕ್ಕೆ ಹೆಚ್ಚಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net