ಭಾರತ ಆಯ್ತು ಇದೀಗ ಅಮೆರಿಕದಲ್ಲೂ Tik Tok ಬಂದ್​: ಕಾರಣ ಹೀಗಿದೆ..

dk (39)
Published on

ಕೆಲ ವರ್ಷಗಳಿಂದೆ ಭಾರತದಲ್ಲಿ ಮನೆ ಮಾತಾಗಿದ್ದ Tik Tok ಇದೀಗ ಸಂಯುಕ್ತ ರಾಷ್ಟ್ರ(US) ಅಮೆರಿಕಾದಲ್ಲೂ ಬಂದ್​ ಮಾಡಲಾಗಿದೆ. ಈ ಬಗ್ಗೆ ಅಲ್ಲಿನ ಸುಪ್ರೀಂಕೋರ್ಟ್​ ಆದೇಶ ಕೂಡ ಹೊರಡಿಸಿದೆ.

ಕಳೆದ ವಾರ ಸುಪ್ರೀಂಕೋರ್ಟ್​ ನಿಷೇಧದ ಬಗ್ಗೆ ಎತ್ತಿ ಹಿಡಿದಿದ್ದು, ಜ.19ರೊಳಗೆ ಬಂದ್​ ಮಾಡುವಂತೆ ಕೋರ್ಟ್​ ಸೂಚಿಸಿತ್ತು. ಹೀಗಾಗಿ, ಅಮೆರಿಕಾದಲ್ಲಿರುವ ಟಿಕಾಟಕ್ ಬಳಕೆದಾರರು ಶನಿವಾರ ತಡರಾತ್ರಿ ಅಪ್ಲಿಕೇಶನ್​ಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ದೇಶದಲ್ಲಿ 170 ಮಿಲಿಯನ್​ಗೂ ಅಧಿಕ ಬಳಕೆದಾರರು ಟಿಕ್​ಟಾಕ್​ ಹೊಂದಿತ್ತು ಎಂದು ವರದಿಯಾಗಿದೆ.

ಯುಎಸ್‌ನಲ್ಲಿ ಟಿಕ್‌ಟಾಕ್ ಅನ್ನು ನಿಷೇಧಿಸುವ ಕಾನೂನನ್ನು ಜಾರಿಗೊಳಿಸಲಾಗಿದೆ. ದುರದೃಷ್ಟವಶಾತ್, ನೀವು ಸದ್ಯಕ್ಕೆ ಟಿಕ್‌ಟಾಕ್ ಅನ್ನು ಬಳಸಲು ಸಾಧ್ಯವಿಲ್ಲ ಎಂದು ಟಿಕ್‌ಟಾಕ್‌ನಿಂದ ಬಳಕೆದಾರರಿಗೆ ಸಂದೇಶವನ್ನು ಕಳುಹಿಸಲಾಗಿದೆ.

ಸೋಮವಾರ(ಜ.20) ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್​ ಟ್ರಂಪ್​ ಅಧಿಕಾರ ವಹಿಸಿಕೊಳ್ಳುವ ಕೆಲವೇ ದಿನಗಳಲ್ಲಿ ಕೋರ್ಟ್​ ನಿಷೇಧದ ಎತ್ತಿಹಿಡಿದೆ. ಅಲ್ಲದೆ, ಇಷ್ಟು ದಿನ ಮಾಜಿ ಅಧ್ಯಕ್ಷ ಜೋ ಬೈಡನ್​ ಆಡಳಿತದ ಅಂಗಳದಲ್ಲಿದ್ದ ಟಿಕ್​ಟಾಕ್​​ ರಾಜಕೀಯ ಚೆಂಡನ್ನು ಟ್ರಂಪ್​ ಆಡಳಿತದಲ್ಲಿ ಬಿಟ್ಟು ಹೋಗಿದೆ. ಅಲ್ಲದೆ, ನಿಷೇಧದ ಬಗ್ಗೆ ಮುಂದಿನ ದಿನಗಳಲ್ಲಿ ಮಾತನಾಡಿವುದಾಗಿ ಹೇಳಿದ್ದ ಟಂಪ್​ಗೆ ಕೋರ್ಟ್​ ಏಕಾಏಕಿ ಶಾಕ್​ ನೀಡಿದೆ.

ಅಮೆರಿಕದಲ್ಲಿ Tik Tok ಬಂದ್​ಗೆ ಕಾರಣ?

ಇನ್ನೂ ಎಲ್ಲರಿಗೂ ತಿಳಿದಿರುವಂತೆ ಟಿಕ್​ಟಾಕ್​ ಆಪ್ಲಿಕೇಶನ್ ಚೀನಾಮೂಲದ ಕಂಪನಿ ಬೈಟ್​​ ಡ್ಯಾನ್ಸ್​. ಟಿಕ್‌ಟಾಕ್ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಹಾಕುತ್ತದೆ ಎಂದು ಯುಎಸ್‌ನ ಅಧಿಕಾರಿಗಳು ಪದೇಪದೆ ಎಚ್ಚರಿಸಿದ್ದಾರೆ. ಏಕೆಂದರೆ ಚೀನಾ ಸರ್ಕಾರವು ಅಮೆರಿಕನ್ನರ ಮೇಲೆ ಕಣ್ಣಿಡಲು ಅಥವಾ ಕೆಲವು ವಿಷಯವನ್ನು ಸಂಗ್ರಹಿಸಲು ಅಥವಾ ನಿಗ್ರಹಿಸುವ ಮೂಲಕ ದೇಶದಲ್ಲಿ ಸಾರ್ವಜನಿಕರ ಮೇಲೆ ರಹಸ್ಯವಾಗಿ ಪ್ರಭಾವ ಬೀರುವ ಅಸ್ತ್ರವಾಗಿ ಟಿಕ್​ಟಾಕ್​ ಅನ್ನು ಬಳಸಬಹುದು ಎಂಬ ಗುಮಾನಿ ಇದೆ.

ಅಲ್ಲದೆ, ಚೀನಾದೊಂದಿಗೆ ಟಿಕ್‌ಟಾಕ್‌ನ ಸಂಬಂಧಗಳು ರಾಷ್ಟ್ರೀಯ ಭದ್ರತೆಗೆ ಒಡ್ಡುವ ಅಪಾಯಗಳ ಬಗ್ಗೆ ಯುಎಸ್ ಶಾಸಕರು ಮತ್ತು ಅಧಿಕಾರಿಗಳು ವರ್ಷಗಳಿಂದ ಎಚ್ಚರಿಕೆ ನೀಡಿದ್ದರು. ಟಿಕ್‌ಟಾಕ್‌ನ ಚೀನೀ ಮೂಲ ಕಂಪನಿ ಬೈಟ್‌ಡ್ಯಾನ್ಸ್ ಅನ್ನು ಅಪ್ಲಿಕೇಶನ್‌ನಲ್ಲಿ ತನ್ನ ಪಾಲನ್ನು US ಮಾರುಕಟ್ಟೆಯಿಂದ ಮಾರಾಟ ಮಾಡಲು ಅಥವಾ ಕಡಿತಗೊಳಿಸುವಂತೆ ಕಳೆದ ವರ್ಷ ಅಲ್ಲಿನ ವಿರೋಧ ಪಕ್ಷ ಒತ್ತಾಯಿಸಿತ್ತು.

ಈ ಎಲ್ಲ ವ್ಯಾಪಕ ವಿರೋಧಗಳ ಮಧ್ಯೆ ವಾದ ವಿವಾದ ಅಲಿಸಿ ಕೋರ್ಟ್​, ರಾಷ್ಟ್ರೀಯ ಭದ್ರತಾ ಕಾಳಜಿಗಳ ಮೇಲೆ ಫೆಡರಲ್ ಕಾನೂನಿನಡಿಯಲ್ಲಿ ಟಿಕ್‌ಟಾಕ್ ಅನ್ನು ಯುಎಸ್‌ನಲ್ಲಿ ನಿಷೇಧಿಸಲಾಗಿದೆ. ಅಲ್ಲದೆ, ಅದರ ಮೂಲ ಕಂಪನಿ ಬೈಟ್‌ಡ್ಯಾನ್ಸ್ ಯುಎಸ್ ಕಾರ್ಯಾಚರಣೆಗಳೊಂದಿಗೆ ಸಂಬಂಧವನ್ನು ಕಡಿತಗೊಳಿಸಬೇಕು ಎಂದು ಅದೇಶ ಹೊರಡಸಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net